ಹಾಸನ : ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಶಕ್ತಿದೇವತೆ ಹಾಸನಾಂಬೆ (Hasanamba) ದೇಗುಲದಲ್ಲೂ ಅಕ್ರಮದ ವಾಸನೆ ಹಬ್ಬಿದೆ.
ಹಾಸನಾಂಬೆ ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಹೀಗಾಗಿ ವರ್ಷಕ್ಕೊಮ್ಮೆ ಭಕ್ತರು ತೆರಳಿ ತಾಯಿಯ ದರ್ಶನ ಮಾಡುತ್ತಾರೆ. ಹೀಗೆ ಕಳೆದ ವರ್ಷ ನಡೆದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ದಾಖಲೆಯ ಮಟ್ಟಕ್ಕೆ ಭಕ್ತರು ಆಗಮಿಸಿದ್ದರು.
ಉತ್ಸವದ ವೇಳೆ ವಿದ್ಯುತ್ ದೀಪಾಲಂಕಾರ ಝಗಮಗಿಸಿದ್ದವು. ಆಗ ನಡೆದ ವಿದ್ಯುತ್ ದೀಪಾಲಂಕಾರದ ವೇಳೆ ನಡೆದ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಟೆಂಡರ್ ಮೂಲಕ ಲಕ್ಷಆಂತರ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಆರ್ಟಿಐ ಕಾರ್ಯಕರ್ತ ಮನು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಮುಜರಾಯಿ ಇಲಾಖೆಯ ಗ್ರೇಡ್ ಒನ್ ದೇವಾಲಯದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರತಿ ವರ್ಷ ನೀಡುವ ಟೆಂಡರ್ ನ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸರಿಯಾದ ದಾಖಲೆ ನೀಡಿಲ್ಲ. ಭಕ್ತರ ಹಣವನ್ನು ದುಂದು ವೆಚ್ಚ ಮಾಡಲಾಗಿದೆ. ಕೇವಲ ದೀಪಾಲಂಕಾರ ಮಾತ್ರವಲ್ಲ ಎಲ್ಲದರಲ್ಲೂ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಕುರಿತು ದೂರು ದಾಖಲಾಗಿದೆ.
RTI ಕಾರ್ಯಕರ್ತ ಮನು ದೂರು ಆಧರಿಸಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲೇ ಲೋಕಾಯುಕ್ತ ಅಧಿಕಾರಿ ಗಾಯಿತ್ರಿ ಅವರಿಂದ ತನಿಖೆ ನಡೆಸಿದ್ದು, ದೂರುದಾರ ಮನು ಸೇರಿ ಮಹಾನಗರ ಪಾಲಿಕೆ ಇಂಜಿನಿಯರ್ ಸುಜಾತಾ ಹಾಗೂ ನಿವೃತ್ತ ಇಂಜಿನಿಯರ್ ರಂಗಸ್ವಾಮಿ ವಿಚಾರಣೆ ನಡೆಸಿದ್ದಾರೆ.
ನಿಯಮ ಪಾಲನೆ ಮಾಡದೆ ವಿದ್ಯುತ್ ದೀಪಾಲಂಕಾರ ಗುತ್ತಿಗೆ ನೀಡಲಾಗಿದೆ. ವಿದ್ಯುತ್ ದೀಪಾಲಂಕಾರಕ್ಕೆಹಲವು ಗುತ್ತಿಗೆದಾರರು ಅರ್ಜಿ ಹಾಕಿದ್ದರೂ ಒಬ್ಬರಿಗೆ ಮಾತ್ರ ಅಧಿಕಾರಿಗಳು ನೆರವು ನೀಡಿದ್ದಾರೆ. ಆ ಟೆಂಡರ್ ನಲ್ಲಿ 15 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಲೈಟಿಂಗ್, ಹೂವಿನ ಅಲಂಕಾರ ಸೇರಿದಂತೆ ಎಲ್ಲ ರೀತಿಯ ಕೆಲಸಗಳಿಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಉಪ್ಪುಂದದಲ್ಲಿ ವಿಜೃಂಭಣೆಯಿಂದ ನೆರವೇರಿದ ‘ರಾಮ ಭಜನಾ ಮಂದಿರ’ ಲೋಕಾರ್ಪಣೆ!



















