ವಿಜಯಪುರ : ವಿಜಯಪುರದ ಐತಿಹಾಸಿಕ ಬಬಲಾದಿ ಮಠದ 2026ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿಯಲಾಗಿದ್ದು, ಈ ಬಾರಿ ಶುಭ, ಅಶುಭ ಎರಡೂ ಸಮಾನವಾಗಿರಲಿವೆಯಂತೆ. ಬಬಲಾದಿ ಸದಾಶಿವ ಮುತ್ಯಾನ ಶಿವರಾತ್ರಿ ಜಾತ್ರೆಯಲ್ಲಿ ಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೊಳಿಮಠ ಮುತ್ಯಾ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಸ್ಫೋಟಕ ಭವಿಷ್ಯ ನುಡಿದಿದ್ದು, 400ವರ್ಷ ಇತಿಹಾಸದ ಚಿಕ್ಕಪ್ಪ ಮುತ್ಯಾ ಬರದಿರೋ ಕಾಲಜ್ಞಾನವನ್ನು ಅವರು ಹೇಳಿದರು. ಮಳೆ ಬೆಳೆ ರಾಜಕೀಯ, ಆರ್ಥಿಕತೆ, ಆರೋಗ್ಯ ಕುರಿತಾಗಿ ಕಾಲಜ್ಞಾನ ನುಡಿದರು. ಭವಿಷ್ಯದಲ್ಲಿ ರಾಜ್ಯ ರಾಜಕೀಯದ ಬಗ್ಗೆಯೂ ಭವಿಷ್ಯವಾಣಿ ನುಡಿದರು. ರಾಜ್ಯ-ಪ್ರಭುಗಳ ಮಧ್ಯೆ ಕಲಹ ಆಗುತ್ತೆ. ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದು, ಸಿಎಂ ಬದಲಾವಣೆ ಆಗುತ್ತಾ? ಎಂಬ ಚರ್ಚೆ ಹುಟ್ಟು ಹಾಕುವಂತೆ ಭವಿಷ್ಯ ಮಾಡಿದೆ.
‘ಅಲ್ಲಲ್ಲಿ ಬರಗಾಲ ಆಗುತ್ತದೆ. ಅಗ್ನಿ ಅನಾಹುತ ಆಗುತ್ತವೆ. ಅತಿ ದೊಡ್ಡ ದು:ಖದ ಸುದ್ದಿ ಬಂದಿತ್ತಣ್ಣಾ. ಪಾಪದ ಕೆಲಸ ಹೆಚ್ಚಾದಿತು. ಕಾಡು ಪ್ರಾಣಿಗೆ ತೊಂದರೆ ಆದಿತು. ಅಲ್ಲಲ್ಲಿ ರಾಜ ಪ್ರಜೆಗಳಿಗೆ ಕಲಹ. ಉತ್ತರ ಭಾರತದಲ್ಲಿ ಅಧಿಕ ಮಳೆ ಆಗಿ ಅತಿವೃಷ್ಟಿ ಆಗುವ ಸಾಧ್ಯತೆಯಿದೆ. ವಿಶ್ವದ ಕೆಲವು ಕಡೆ ಭೂಕುಸಿತ ಆಗುತ್ತೆ. ರೈತರಿಗೆ ಈ ವರ್ಷ ಹೆಚ್ಚಿನ ಒಳ್ಳೆಯದು ಆಗುತ್ತೆ. ದೇಶದ ಗಡಿಗಳಲ್ಲಿ ಆತಂಕದ ವಾತಾವರಣ, ಯುದ್ಧ ಕಾರ್ಮೋಡ, ವಿಕೋಪದ ಹಾವಳಿ ಹೆಚ್ಚಾದೀತು ತಿಳಿಯಿರಣ್ಣ. ಬಡವ ಶ್ರೀಮಂತರ ಮಧ್ಯೆ ಅಂತರ ಕಡಿಮೆ ಆಗುತ್ತದೆ. ಈ ವರ್ಷ ಉತ್ತಮ ಮಳೆ ಆಗುವ ಸಾಧ್ಯತೆಯಿದೆ. ಭೂಕುಸಿತ ವಿಪತ್ತು ಎದುರಾಗಬಹುದು. ಮಳೆ ಆಗಿ ಪ್ರವಾಹವಾದರೂ ಯಾವುದೇ ಆತಂಕವಿಲ್ಲ. ಮುಂಗಾರು ಮಳೆ ಏಳಾಣಿ, ಹಿಂಗಾರು ಮಳೆ ಒಂಬತ್ತಾಣಿ’ ಎಂದು ಮಳೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗಲೇ ಆರೋಪಿಗಳು ಲಾಕ್!



















