ಕೋಲಾರ: ಬಾಲಕಿಯನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 30 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋಲಾರದ ಪೋಕ್ಸೊ ವಿಶೇಷ ಕೋರ್ಟ್ ನ್ಯಾಯಧೀಶ ಪ್ರಸಾದ್ ಕೆ.ಬಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಕೋಲಾರ ಜಿಲ್ಲೆಯ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ರ ಆಗಸ್ಟ್ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದು ಸಾಬೀತಾದ ಹಿನ್ನೆಲೆ, ಆರೋಪಿ ಸಂದೀಪ್ (21) ಅಪರಾಧಿ ಎಂದು ಪೋಕ್ಸೊ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ನೊಂದ ಬಾಲಕಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಗಿದ್ದು, ಆರೋಪಿಗೆ 20 ವರ್ಷ ಸಜೆ ಹಾಗು 30 ಸಾವಿರ ದಂಡ ವಿಧಿಸಲಾಗಿದೆ.
ಇದನ್ನೂ ಓದಿ : ಐಶಾರಾಮಿ ಕಾರುಗಳಲ್ಲಿ ಬಂದು ಕಳ್ಳತನ ಮಾಡಿದ ವಿಲಾಸಿ ಕಳ್ಳರು | 2 ಮನೆಗಳಲ್ಲಿ ದರೋಡೆ



















