ಬೆಳಗಾವಿ : ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಡೀ ಕುಟುಂಬ ದಾರುಣ ಅಂತ್ಯಕಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ.
ಲಾರಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಗಂಡ, ಹೆಂಡ್ತಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿದ್ದ ಗಿರೇಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ ಕುಂದ್ರಾಳಿ(27), ಮಗು ಆರಾಧ್ಯ ಕುಂದ್ರಾಳಿ(7) ಮೃತ ದುರ್ವೈವಿಗಳು. ಮೂವರು ಬೈಕ್ ಮೇಲೆ ಮಹಾರಾಷ್ಟ್ರದ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗಿರೇಪ್ಪಾ, ಮಂಜುಳಾ ಹಾಗೂ ಆರಾಧ್ಯ ಒಂದೇ ಬೈಕ್ನಲ್ಲಿ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಗಂಡ-ಹೆಂಡ್ತಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಜೇಸನ್ ಗಿಲ್ಲೆಸ್ಪಿ ಆಯ್ಕೆಯ ಟಾಪ್-5 ಟಿ20 ಬೌಲರ್ಸ್ ಪಟ್ಟಿ ಬಹಿರಂಗ | ಬುಮ್ರಾ ಹಿಂದಿಕ್ಕಿದ ಪಾಕ್ ವೇಗಿ!



















