ಬೆಂಗಳೂರು : ಇಂದು ನಟ ದರ್ಶನ್ ಬರ್ತಡೇ. 49ನೇ ವಸಂತಕ್ಕೆ ನಟ ದರ್ಶನ್ ಕಾಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಹಾಗೂ ಕೆಲವೆಡೆ ದರ್ಶನ್ ಬೇಗ ರಿಲೀಸ್ ಆಗಲಿ ಎಂದು ಮೃತ್ಯುಂಜಯ ಹೋಮ ಮಾಡಿಸಿದ್ದಾರೆ. ಬೆಂಗಳೂರಿನ ಆರ್.ಆರ್.ನಗರ ಮತ್ತು ಜೆ.ಪಿ.ನಗರದಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು, ನಟಿ ತನಿಷಾ ಕುಪ್ಪುಂಡ ಹಾಗೂ ಗಾಯಕ ಸುಪ್ರೀತ್ ಗಂಧಾರ ಭಾಗಿಯಾಗಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್, ಈ ಬಾರಿಯ ಹುಟ್ಟುಹಬ್ಬವನ್ನು ಜೈಲಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ದರ್ಶನ್ ಜೈಲಲ್ಲಿದ್ರೂ, ಮನೆ ಬಳಿ ಜಮಾಯಿಸುತ್ತಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅವರ ಫ್ಯಾನ್ಸ್ ಮಾಡುತ್ತಿದ್ದಾರೆ.. ದರ್ಶನ್ ಇಲ್ಲದೆ ಈ ಸಲ ‘D-ಸಂಭ್ರಮ’ ‘ಸೆಲೆಬ್ರಿಟಿಗಳ ಸಂಭ್ರಮ’ ಎಂದು ದರ್ಶನ್ ಅನುಪಸ್ಥಿತಿಯಲ್ಲೇ ಬರ್ತಡೆ ಆಚರಣೆ ಮಾಡುತ್ತಿದ್ದಾರೆ.
ದರ್ಶನ್‌ಗೆ ಶುಭಕೊರೀದ ಸಿನಿಸ್ಟಾರ್ಸ್
ದರ್ಶನ್ 49ನೇ ವರ್ಷದ ಹುಟ್ಟುಹಬ್ಬದ ಹಿನ್ನಲೇ ಮಗ ವಿನೀಶ್, ದರ್ಶನ್ ಗೆ ಪ್ರೀತಿಯ ವಿಶ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಅಪ್ಪನಿಗೆ ವಿಶ್ ಮಾಡಿದ ವಿನೀಶ್, ಅಪ್ಪನ ಜೊತೆಗಿನ ಪೋಟೋ ಹಂಚಿಕೊಂಡಿದ್ದಾರೆ.
ಹ್ಯಾಪಿ ಬರ್ತಡೇ ಪಪ್ಪ, ಐ ಲವ್ ಯೂ, ಐ ಮಿಸ್ ಯೂ ಅಂತ ಪೋಸ್ಟ್ ಮಾಡಿದ್ದಾರೆ. ತಂದೆಯ ಜೊತೆ ಖುಷಿಯಾದ ಕ್ಷಣಗಳನ್ನ ಕಳೆದಿದ್ದ ವಿನೀಶ್, ಬರ್ತಡೇ ದಿನ ಪ್ರೀತಿಯ ಅಪ್ಪನಿಗೆ ಕೇಕ್ ಕಟ್ ಮಾಡಿ ತಿನ್ನಿಸುತ್ತಿದ್ದರು. ಆದ್ರೆ ಈಗ ಜೈಲಿನಲ್ಲಿರುವ ಅಪ್ಪನಿಗೆ ವಿಡಿಯೋ ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ.
ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಕೂಡ ಪತಿ ದರ್ಶನ್‌ಗೆ ಬರ್ತಡೇ ವಿಶ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಪೋಟೋ ಪೋಸ್ಟ್ ಮಾಡಿದ ವಿಜಯಲಕ್ಷ್ಮೀ ದರ್ಶನ್, ಮೂರು ಜನ ಇರುವ ಪೋಟೋ ಸೇರ್ ಮಾಡಿ, to the man who is celebrated everyday happy birthday ಎಂದು ಪೋಸ್ಟ್ ಮಾಡಿದ್ದಾರೆ.
ಹಾಗೆಯೇ ನಟ ದರ್ಶನ್ ಗೆ ‘ಶೋಕ್ದಾರ್’ ಶುಭಾಶಯ..! ತಿಳಿಸಿದ್ದಾರೆ. ದರ್ಶನ್ ಆಪ್ತ ಧನ್ವೀರ್ ಕೂಡ ಹಳೇ ಬರ್ತಡೇ ವಿಡಿಯೋ ಹಂಚಿಕೊಂಡು ‘ಉಸಿರು ಇರೋವರೆಗೂ ನಿಮ್ಮಿಂದೆ ಇರ್ತೀವಿ’ ಎಂದು ಹೇಳಿದ್ದಾರೆ.
ಹಾಗೆಯೇ ದರ್ಶನ್ ಹುಟ್ಟುಹಬ್ಬಕ್ಕೆ ‘ಕ್ರೇಜಿ ಕ್ವೀನ್’ ನಟಿ ರಕ್ಷಿತಾ ವಿಶ್ ಮಾಡಿ, ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿದಿನವೂ ನಿನ್ನನ್ನ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನನ್ನ ಮತ್ತೆ ಸಂತೋಷದಿಂದ ನೋಡಲು ಬಯಸುತ್ತೇನೆ. ಬೇಗ ಮನೆಗೆ ಬಾ ಕಣೋ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ. ಇನ್ನು, ನಟಿ ರಚಿತರಾಮ್, ನಟ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಹಾಗೂ ಇನ್ನಿತರ ಸಿನಿಸ್ಟಾರ್ಸ್‌ಗಳು ಶುಭಕೊರಿದ್ದಾರೆ.
ಇದನ್ನೂ ಓದಿ : ದರ್ಶನ್ ಹುಟ್ಟುಹಬ್ಬ | ಬಿಕೋ ಎನ್ನುತ್ತಿರೋ ಫಾರಂ ಹೌಸ್..!



















