ರಾಯಚೂರು : ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿ ಭಕ್ತಿಭಾವದಿಂದ ಮಹಾ ಶಿವರಾತ್ರಿ ಆಚರಣೆ ನಡೆಯಿತು.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಲಿಂಗಕ್ಕೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಆರತಿ ನೆರವೇರಿಸಲಾಯಿತು.
ಶಿವರಾತ್ರಿ ಹಿನ್ನಲೆಯಲ್ಲಿ ಮಂತ್ರಾಲಯದತ್ತ ಭಕ್ತರ ದಂಡು ಹರಿದುಬಂದಿದ್ದು, ದೇವರ ದರ್ಶನಕ್ಕಾಗಿ ಭಕ್ತರು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಶ್ರೀಗಳು ಸ್ವತಃ ಶಿವಲಿಂಗ ಪೂಜೆ ನೆರವೇರಿಸಿ ಮಹಾ ಶಿವರಾತ್ರಿಯನ್ನು ಆಚರಿಸಿದರು. ದೇವಾಲಯದ ಆವರಣದಲ್ಲಿ ಭಕ್ತಿ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಜಪ, ಭಜನೆಗಳಲ್ಲಿ ತೊಡಗಿಕೊಂಡಿದ್ದರು.
ಇದನ್ನೂ ಓದಿ : ಮಹಾಶಿವರಾತ್ರಿ ದಿನ ಮಾದಪ್ಪನ ಮೊರೆ ಹೋದ ಡಿಕೆಶಿ ಪತ್ನಿ!



















