ಬಳ್ಳಾರಿ : ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದ ಕಂಪ್ಲಿ ಉತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿಂದ ಉತ್ಸವ ರಂಗೇರಿತ್ತು.
ಕಾರ್ಯಕ್ರಮದಲ್ಲಿ ಜನಪ್ರಿಯ ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್ ಗಣೇಶ್ ಭರ್ಜರಿ ಹೆಜ್ಜೆ ಹಾಕಿ ಜನರ ಗಮನ ಸೆಳೆದಿದ್ದಾರೆ. ಶಾಸಕರ ನೃತ್ಯಕ್ಕೆ ಜನರು ಕೇಕೆ ಹೊಡೆದು ಕಾರ್ಕ್ರಮಕ್ಕೆ ಜೋಶ್ ತುಂಬಿದ್ದಾರೆ.
ಇದೇ ವೇಳೆ ಜೆ.ಎನ್ ಗಣೇಶ್ ಅವರ ಪುತ್ರ ಕೂಡ ವೇದಿಕೆಯಲ್ಲಿ ಉತ್ಸಾಹಭರಿತ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕಂಪ್ಲಿ ಉತ್ಸವದ ಸಮಾರೋಪ ಕಾರ್ಯಕ್ರಮ ಜನಸಾಗರದ ನಡುವೆ ಯಶಸ್ವಿಯಾಗಿ ನೆರವೇರಿತು.
ಇದನ್ನೂ ಓದಿ : ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ | ದೇವಾನಂದ ಶೆಟ್ಟಿ ಸೇರಿ 22 ಕೆಲಸಗಾರರು ಅಂದರ್



















