ಬೆಂಗಳೂರು: ರಸ್ತೆಯಲ್ಲಿ ಜೋತು ಬಿದ್ದಿದ್ದ ಮರ ತೆರವು ವಿಚಾರವಾಗಿ ಉದ್ಭವಿಸಿದ ಗಲಾಟೆ ಹಲ್ಲೆಗೆ ತಿರುಗಿದ ಘಟನೆ ಕುಮಾರಸ್ವಾಮಿ ಲೇಔಟ್‌ನ ಚಂದ್ರನಗರದಲ್ಲಿ ನಡೆದಿದೆ.
ಮಾಜಿ ನಗರ ಸಭೆ ಸದಸ್ಯೆ ಇಂದ್ರಾಣಿ ಅವರ ಪತಿ ಟಿ. ಕುಮಾರ್ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆ ವತಿಯಿಂದ ಮರಗಳ ಕೊಂಬೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬಿಎಂಟಿಸಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸ್ಥಳದಲ್ಲಿದ್ದ ಪ್ರತಾಪ್ ರೆಡ್ಡಿ ಅವರೊಂದಿಗೆ ಟಿ. ಕುಮಾರ್ ವಾಗ್ವಾದಕ್ಕಿಳಿದಿದ್ದು, ಬಳಿಕ ಹಲ್ಲೆ ನಡೆಸಿದರೆಂದು ಹೇಳಲಾಗಿದೆ.
ಹಲ್ಲೆಯಿಂದ ಪ್ರತಾಪ್ ರೆಡ್ಡಿ ಅವರ ಕೈ ಮುರಿದಿದ್ದು, ಅವರನ್ನು ತಕ್ಷಣವೇ ಜಯನಗರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ ಬಿಜೆಪಿ GBA ಚುನಾವಣಾ ಉಸ್ತುವಾರಿ ರಾಮ್ ಮಾಧವ್ ಭೇಟಿ | ಮುಂಬರುವ ಎಲೆಕ್ಷನ್‌ಗೆ ತಯಾರಿ



















