ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರು ನಮ್ಮ ಸಿಲಿಕಾನ್ ಸಿಟಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಗಾರ್ಡನ್ ಸಿಟಿ ಬೆಂಗಳೂರಿಗೆ ದಿನನಿತ್ಯ ದೇಶ.ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಾರ್ಡನ ಸಿಟಿಯ ಸೌಂದರ್ಯ ವಿಕ್ಷೀಸಲು ಬರುತ್ತಾರೆ. ಇನ್ನೂ ಮತ್ತಷ್ಟು ಪ್ರವಾಸಿಗರ ಆಕರ್ಷಣೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜಿಬಿಎಗೆ ಪತ್ರ ಬರೆದು ನಗರದ ಹಲವು ಕೆರೆಗಳಲ್ಲಿ ಪ್ರವಾಸಿಗರಿಗೆ ಹಾಗೂ ಸ್ಥಳೀಯ ಜನರ ಮನರಂಜನೆಗೆ ಬೋಟಿಂಗ್ ವ್ಯವಸ್ಥೆ ಮಾಡುವಂತೆ ಪತ್ರ ಮುಖೇನ ನಿರ್ದೇಶನ ನೀಡಿದರೆ.

ಇನ್ನೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 183 ಕೆರೆಗಳು ಇದ್ದು ಅವುಗಳಲ್ಲಿ ಸುಮಾರು 10. ಕೆರೆಗಳಲ್ಲಿ ದೋಣಿ ವಿಹಾರ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಯಲಹಂಕ ಕೆರೆ, ರಾಚೇನಹಳ್ಳಿಕೆರೆ, ಬೇಗೂರು ಕೆರೆ, ಮಡಿವಾಳ ಕೆರೆ, ಕಗ್ಗದಾಸಪುರ ಕೆರೆ ಸೇರಿದಂತೆ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲು ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ( ಕೆಟಿಸಿಡಿಎ) ಒಪ್ಪಿಗೆ ಪಡೆಯಲು ಪತ್ರ ಬರೆಯಲಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದರೆ.
ಇನ್ನೂ ಈ 10 ಕೆರೆಗಳನ್ನು ಈಗಾಗಲೇ ಪುನರುಜ್ಜೀವನ ನೀಡಲಾಗಿದೆ. ಕೆರೆಗಳನ್ನು ಸ್ವಚ್ಚತೆ ಮಾಡಿದ ನಂತರ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಕೆರೆಗಳನ್ನು ಅವರಿಗೆ ವಹಿಸಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ 108 ಆಂಬ್ಯುಲೆನ್ಸ್ ಸಖತ್ ಸ್ಮಾರ್ಟ್.. ಆಪ್ ಆಧಾರಿತ ಸೇವೆಗೆ ಆರೋಗ್ಯ ಇಲಾಖೆ ಸಜ್ಜು



















