ಬೆಳಗಾವಿ : ಬೆಳಗಾವಿ ನಗರದ ಉದ್ಯಮ್ ಭಾಗದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಸಿಬ್ಬಂದಿಗಳು ಕನ್ನಡ ಬದಲು ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಸಂವಹನ ಮಾಡಿದ ಘಟನೆಗೆ ಜನರು ಕಿಡಿಕಾರಿದ್ದಾರೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಅಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಬ್ಯಾಂಕ್‌ಗೆ ಕರೆ ನೀಡಲಾಗಿತ್ತು. ಕಾರ್ಯಕರ್ತರು “ಕನ್ನಡದಲ್ಲಿ ಮಾತ್ರ ಮಾತನಾಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಬ್ಯಾಂಕ್ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿ, ಕನ್ನಡಿಗರ ಕ್ಷಮೆ ಕೋರಿ, ಮುಂದಿನಿಂದ ಕನ್ನಡದಲ್ಲಿ ಮಾತ್ರ ಸಂವಹನ ಮಾಡಲಿರುವುದಾಗಿ ಭರವಸೆ ನೀಡಿದರು. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕೂಡ ಸಾರ್ವಜನಿಕರ ಮುಂದೆ ಕ್ಷಮೆ ಕೋರಿ, ಘಟನೆಯ ತೀರ್ಮಾನ ಒಪ್ಪಿಕೊಂಡರು.
ಇದನ್ನೂ ಓದಿ : ಫ್ಲ್ಯಾಟ್, ಚಿನ್ನ ಖರೀದಿಸಿಕೊಡುವ ನೆಪದಲ್ಲಿ ಕೋಟಿ ಕೋಟಿ ವಂಚನೆ | ಉಡುಪಿಯ ದಂಪತಿ ವಿರುದ್ದ ಪ್ರಕರಣ ದಾಖಲು!



















