ಬೆಂಗಳೂರು : ಡೆಲಿವರಿ ಬಾಯ್ ಮೇಲೆ ಡೊಮಿನೊಸ್ ಮ್ಯಾನೇಜರ್ ಹಲ್ಲೆ ನಡೆಸಿದ ಆರೋಪ ಕೋರಮಂಗಲದಲ್ಲಿ ದಾಖಲಾಗಿದೆ. ಕೋರಮಂಗಲದ ಮಾಲ್ ಒಂದರಲ್ಲಿ ಇರುವ ಡೊಮಿನೊಸ್ ಶಾಖೆಯ ಮ್ಯಾನೇಜರ್, ಡೆಲಿವರಿ ಬಾಯ್ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಹಲ್ಲೆಗೆ ಒಳಗಾದವರು ಮಂಗಳೂರು ಮೂಲದ ಯುವಕ ಸಮದ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಹೊಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವೈದ್ಯಕೀಯ–ಕಾನೂನು ಪ್ರಕರಣ (MLC) ದಾಖಲಿಸಲಾಗಿದೆ.
ಘಟನೆಯ ಕುರಿತು ಸದ್ದುಗುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಜಿಲ್ಲಾಧಿಕಾರಿ ಕಚೇರಿಯಲ್ಲೇ ಬರ್ತಡೇ ಸೆಲೆಬ್ರೆಷನ್ ; ಸಾರ್ವಜನಿಕರ ಆಕ್ರೋಶ



















