ಬೆಂಗಳೂರು : ಪಕ್ಕದ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಸತ್ತ ಕಾಗೆಗಳಲ್ಲಿ H5N1 (ಏವಿಯನ್ ಇನ್ಫ್ಲುಯೆನ್ಸಾ / ಬರ್ಡ್ ಫ್ಲ್ಯೂ) ವೈರಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜನವರಿಯಲ್ಲಿ ಸಂಗ್ರಹಿಸಲಾದ ಮಾದರಿಗಳ ಪರೀಕ್ಷೆಯಲ್ಲಿ ಅನೇಕ ಸತ್ತ ಕಾಗೆಗಳಲ್ಲಿ ಈ ವೈರಸ್ ದೃಢಪಟ್ಟಿದೆ. ಸೋಂಕಿತ ಪಕ್ಷಿಗಳ ಲಾಲಾರಸ ಹಾಗೂ ಮಲದ ಮೂಲಕ ಬರ್ಡ್ ಫ್ಲ್ಯೂ ವೈರಸ್ ಹರಡುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ವೈರಸ್ ಮಾನವರಿಗೆ ತಗುಲುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
H5N1 ವೈರಸ್‌ನ ಲಕ್ಷಣಗಳು:
- ಜ್ವರ
- ಕೆಮ್ಮು
- ಗಂಟಲು ನೋವು
- ಸ್ನಾಯು ನೋವು
- ಉಸಿರಾಟದ ತೊಂದರೆ
- ಕಣ್ಣಿನ ಸೋಂಕು
ಮುನ್ನೆಚ್ಚರಿಕೆ ಕ್ರಮಗಳು:
- ಸತ್ತ ಅಥವಾ ಅನಾರೋಗ್ಯಪೀಡಿತ ಪಕ್ಷಿಗಳಿಂದ ದೂರವಿರಬೇಕು
- ಕೋಳಿ ಮಾಂಸ ಹಾಗೂ ಮೊಟ್ಟೆಗಳನ್ನು ಸಂಪೂರ್ಣವಾಗಿ ಬೇಯಿಸಿ ಸೇವಿಸಬೇಕು
- ಕೋಳಿ ಸಾಕಣೆದಾರರು ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಬಳಸಬೇಕು
- ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು
ಇದನ್ನೂ ಓದಿ : 2.5 ಕೋಟಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿದ ಸರ್ಕಾರ | ನಿಮ್ಮ ಕಾರ್ಡ್ ಗತಿ ಏನಾಗಿದೆ ತಿಳಿಯಿರಿ



















