ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಮನುಷ್ಯರ ಅಪಹರಣ, ಕಳ್ಳತನದ ಕೇಸ್‌ಗಳನ್ನು ನಾವು ಕೇಳಿರುತ್ತೇವೆ. ಇಲ್ಲೊಂದು ಕಡೆ ‘ಬೆಕ್ಕಿನ’ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಲಾಗಿದೆ. ಗರ್ಭಿಣಿ ಬೆಕ್ಕನ್ನು ಅಕ್ರಮವಾಗಿ ಸ್ಥಳಾಂತರ (ಕಿಡ್ನ್ಯಾಪ್) ಮಾಡಲಾಗಿದೆ ಎಂಬ ಆರೋಪದಡಿ ಬರೋಬ್ಬರಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಗರದ ಎಚ್.ಎ.ಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಇಲ್ಲಿನ ‘ವ್ಯಾನ್ಶಿ ಸಾಲೇಟೇರ್’ ಅಪಾರ್ಟ್ಮೆಂಟ್ ಆವರಣದಲ್ಲಿದ್ದ ಗರ್ಭಿಣಿ ಬೆಕ್ಕೊಂದನ್ನು ಅಕ್ರಮವಾಗಿ ಹಿಡಿದು ಬೇರೆಡೆಗೆ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಾಣಿಪ್ರಿಯರಾಗಿರುವ ಹರೀಶ್ ಎಂಬುವರು ಈ ಕುರಿತು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಾರ್ಟ್ಮೆಂಟ್‌ನಲ್ಲಿದ್ದ ಮೂಕ ಪ್ರಾಣಿಯ ಹಕ್ಕಿಗಾಗಿ ಅವರು ಕಾನೂನಿನ ಮೊರೆ ಹೋಗಿದ್ದಾರೆ. ಪ್ರಾಣಿಗಳನ್ನು ಅಕ್ರಮವಾಗಿ ಸ್ಥಳಾಂತರ ಮಾಡುವುದು ಮತ್ತು ಹಿಂಸಿಸುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಬೆಕ್ಕನ್ನು ಸ್ಥಳಾಂತರಿಸಲು ಕಾರಣರಾದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮ್, ಸೆಕ್ಯುರಿಟಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಯಾವ ಕಾಯ್ದೆಯಡಿ ಪ್ರಕರಣ?
ದೂರಿನನ್ವಯ ಪೊಲೀಸರು ‘ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಇಸ್ಲಾಮಾಬಾದ್ ಮಸೀದಿ ಸ್ಫೋಟ | “ನಿಮ್ಮ ಸಮಸ್ಯೆಗಳಿಗೆ ಬೇರೆಯವರನ್ನು ದೂಷಿಸಬೇಡಿ” – ಪಾಕಿಸ್ತಾನದ ಆರೋಪಕ್ಕೆ ಭಾರತದ ತಿರುಗೇಟು!



















