ಬೆಂಗಳೂರು: ಬನ್ನೇರುಘಟ್ಟದ ಕಾನ್ಫಿಡೆಂಟ್ ಕ್ಯಾಸ್ಕೇಡ್‌ನಲ್ಲಿ ಸಿ.ಜೆ.ರಾಯ್ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆಯಾಗಿದ್ದು, ಕುಟುಂಬಸ್ಥರು ರಾಯ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸ್ಟ್ರೆಚರ್ ನಲ್ಲಿಯೇ ಮಗನ ಅಂತಿಮ ದರ್ಶನ ಪಡೆಯಲು ಬಂದ ರಾಯ್ ತಾಯಿ ಮಗನನ್ನು ಕಂಡು ಬಿಕ್ಕಿ ಬಿಕ್ಕ ಅಳುತ್ತಾ ಗೋಳಾಡಿದ್ದಾರೆ. ರಾಯ್ ಅವರ ತಾಯಿ, ಪತ್ನಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಮಧ್ಯಾಹ್ನ ಎರಡು ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನದ ಬಳಿಕ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ರಾಯ್ ಸಾಮೂಹಿಕ ಪ್ರಾರ್ಥನೆ, ಕ್ರಿಶ್ಚಿಯನ್ ಸಂಪ್ರದಾಯದಂತೆ ಕುಟುಂಬಸ್ಥರು ವಿಧಿವಿಧಾನ ಪೂರೈಸಲಿದ್ದಾರೆ.
ತದನಂತರ ಮತ್ತೆ ಬನ್ನೇರುಘಟ್ಟದ ಕಾನ್ಫಿಡೆಂಟ್ ಕ್ಯಾಸ್ಕೇಡ್ ಗೆ ರಾಯ್ ಪಾರ್ಥಿವ ಶರೀರವನ್ನು ತಂದು ಅವರು ಇಷ್ಟಪಟ್ಟ ಜಾಗದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.
ಇನ್ನೂ, ತಂದೆಯನ್ನು ನೆನೆದ ಪುತ್ರಿ ರಿಯಾ ಮೇರಿ ರಾಯ್ ಅವರು ಸಿಜೆ ರಾಯ್ ಅಂತ್ಯಕ್ರಿಯೆ ಬಗ್ಗೆ, ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ, ಅಂತ್ಯ ಸಂಸ್ಕಾರದ ವಿಧಿ ವಿಧಾನ, ಸಾಮೂಹಿಕ ಪ್ರಾರ್ಥನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆ ಏನು?
ತೆರಿಗೆ ವಂಚನೆ ಆರೋಪ ಸಂಬಂಧ ರಿಚ್ಮಂಡ್ ಟೌನ್ ಸಮೀಪದ ತಮ್ಮ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಸಿ.ಜೆ.ರಾಯ್ ಅವರು ಎದೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಸಂಬಂಧ ಮೃತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಅವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ!
Advertisement
L



















