ಮೈಸೂರು: ನಗರದಲ್ಲಿ ಅಶೋಕ ರಸ್ತೆಯ ಪೋಸ್ಟ್ ಆಫೀಸ್‌ಗಳಲ್ಲಿ ಕನ್ನಡ ಚಲನ್ ಬಳಸಿ ಎಂದು ಕನ್ನಡ ಸೇನಾ ಪಡೆ ಸಂಘಟನೆಯ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನೆಯ ಪ್ರಮುಖ ವಿಚಾರವೇನೆಂದರೆ, ಇತ್ತೀಚಿನ ಪೋಸ್ಟ್ ಆಫೀಸ್ ಚಲನ್‌ಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿರುವುದರಿಂದ ಕನ್ನಡಿಗರು ಸೌಲಭ್ಯವನ್ನು ಅನುಭವಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕನ್ನಡದಲ್ಲಿಯೂ ಚಲನ್ ನೀಡಿ ಎಂದು ಆಗ್ರಹಿಸಿದ್ದಾರೆ.
ಸಂಘಟನೆಯವರು, ಸಾರ್ವಜನಿಕರಿಗೆ ಸ್ಥಳೀಯ ಭಾಷೆಯಲ್ಲಿ ಸೇವೆ ದೊರಕುವಂತೆ ಖಾತರಿಪಡಿಸಲು ಮತ್ತು ಕನ್ನಡ ಭಾಷೆಯ ಹಕ್ಕುಗಳು ಉಳಿಯುವಂತೆ ನೋಡಿಕೊಳ್ಳಲು ಕ್ರಮವನ್ನು ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಅಂಚೆ ಇಲಾಖೆಯಲ್ಲಿ 28,740 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ | ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು



















