ಬೆಂಗಳೂರು:‘ರಾಧಾ ರಮಣ’, ಗಾಂಧಾರಿ’ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಕಾವ್ಯಾ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ಕುಟುಂಬದವರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸೋಮಶೇಖರ್ ಹಾಗೂ ನಂದೀಶ್ ಇಬ್ಬರು ಸಹೋದರರು ಸೋಮಶೇಖರ್ -ಕಾವ್ಯ ಗೌಡ ದಂಪತಿ ಹಾಗೂ ನಂದೀಶ್ – ಪ್ರೇಮಾ ದಂಪತಿ. ಇಬ್ಬರು ಒಂದೇ ಮನೆಯಲ್ಲಿ ವಾಸವಿದ್ದರು ಹೀಗಾಗಿ ಕಾವ್ಯ ಮತ್ತು ಪ್ರೇಮಾ ಮಧ್ಯೆ ಮನಸ್ತಾಪ, ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಆಗ್ತಿತ್ತು ಎನ್ನಲಾಗಿದೆ.
ನಿನ್ನೆ ಸೋಮವಾರ ಕಾವ್ಯ ಮತ್ತು ಪ್ರೇಮಾ ಸಂಬಂಧಿಕರು ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಗಲಾಟೆಯಾಗಿದೆ. ಆಗ ಸೋಮಶೇಖರ್ ಅವರ ಅತ್ತಿಗೆಯ ತಂದೆ ರವಿಕುಮಾರ್, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ. ಮನೆಗೆ ನುಗ್ಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಾವ್ಯಾ ಗೌಡಗೆ ರೇಪ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಕಾವ್ಯಾ ಮೇಲೂ ಹಲ್ಲೆ ಮಾಡಲಾಗಿದೆ.

ಸದ್ಯ ಸೋಮಶೇಖರ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರು ರಾಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರೇಮ, ನಂದಿಶ್. ಪ್ರಿಯಾ, ರವಿಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಡಾಗ್ ಸತೀಶ್‌ಗೆ ಗಿಲ್ಲಿ ಫ್ಯಾನ್ಸ್‌ನಿಂದ ಕೊಲೆ ಬೆದರಿಕೆ | 80 ಜನರ ಮೇಲೆ ಕೇಸ್ ದಾಖಲು



















