ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದೊಂದಿಗೆ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಈಗ ‘ದೀಪಿಕಾ ವಿದ್ಯಾರ್ಥಿವೇತನ‘ (Deepika Scholarship 2026)ದ 2ನೇ ಹಂತದಲ್ಲಿ ಅರ್ಜಿಗಳನ್ನು ಸಲ್ಲಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ.
ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿರುವ ಆಯಾ ಕೋರ್ಸ್ ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ವರ್ಷಕ್ಕೆ 30 ಸಾವಿರ ರೂ.ವರೆಗೆ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮುಗಿಸಿ, ಪ್ರಸ್ತುತ ಪದವಿ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಇದರಿಂದ ಅನುಕೂಲವಾಗಲಿದೆ.
ಯಾರಿಗೆ ಎಷ್ಟು ಸ್ಕಾಲರ್ ಶಿಪ್?
• ಎಂಜಿನಿಯರಿಂಗ್ ಅಥವಾ ವೈದ್ಯಕೀಯ (4-5 ವರ್ಷ): ಒಟ್ಟು 1.5 ಲಕ್ಷ ರೂ.ವರೆಗೆ ನೆರವು
• ಸಾಮಾನ್ಯ ಪದವಿ (3 ವರ್ಷ): ಒಟ್ಟು 90,000 ರೂ.ವರೆಗೆ ಆರ್ಥಿಕ ನೆರವು.
• ಡಿಪ್ಲೊಮಾ ಕೋರ್ಸ್ (2-3 ವರ್ಷ): 60,000 ರೂ.ನಿಂದ 90,000 ರೂ.ವರೆಗೆ ಸ್ಕಾಲರ್ ಶಿಪ್
ಅರ್ಜಿ ಸಲ್ಲಿಸಲು ಬಯಸುವವರು ಅಜೀಂ ಪ್ರೇಮ್ಜೀ ಫೌಂಡೇಶನ್ ಅಧಿಕೃತ ವೆಬ್ಸೈಟ್ ಆಗಿರುವ azimpremjifoundation.org/what-we-do/education/azim-premji-scholarship/ ಗೆ ಭೇಟಿ ನೀಡಬೇಕು ಎಂದು ತಿಳಿಸಲಾಗಿದೆ. ವಿದ್ಯಾರ್ಥಿನಿಯರು ಯಾವುದೇ ಸೆಮಿಸ್ಟರ್ ನಲ್ಲಿ ಬ್ಯಾಗ್ ಲಾಗ್ ಉಳಿಸಿಕೊಂಡಿರಬಾರದು ಎಂದು ತಿಳಿಸಲಾಗಿದೆ. 10ನೇ ಮತ್ತು ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಕಾಲೇಜು ಪ್ರವೇಶದ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮ ಜಾರಿ | ನೀವು ತಿಳಿದುಕೊಳ್ಳಬೇಕಾಗಿರುವುದು ಇಷ್ಟು



















