ಹುಬ್ಬಳ್ಳಿ : ಪೆನ್ಷನ್ ಹೆಚ್ಚಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿ ಬಳಿ ಇಪಿಎಸ್ 95 ನ್ಯಾಷನಲ್ ಎಜಿಟೇಷನ್ ಕಮಿಟಿ ಆಗ್ರಹಿಸಿದ್ದು, ಭಜನೆ ಹಾಡು ಹಾಡಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಇಲ್ಲಿ ಸೇರಿದ್ದ ನಿವೃತ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸದ್ಯ ಮಾಸಿಕ ಕೇವಲ 1170 ರೂಪಾಯಿ ಪೆನ್ಷನ್ ನೀಡಲಾಗುತ್ತಿದೆ. ಇದರಿಂದ ನಿವೃತ್ತರಿಗೆ ಯಾವುದೇ ಪ್ರಯೋಜನವಿಲ್ಲ ಕನಿಷ್ಠ ಮಾಸಿಕ 7500 ರೂಪಾಯಿ ಪೆನ್ಷನ್ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ನಿವೃತ್ತರ ಪರವಾಗಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಇಪಿಎಸ್ 95 ನ್ಯಾಷನಲ್ ಎಜಿಟೇಷನ್ ಕಮಿಟಿ ಆಗ್ರಹಿಸಿದೆ.
ಇದನ್ನೂ ಓದಿ : ಮಂಡ್ಯ | ಮನ್ರೇಗಾ ಹೆಸರು ಬದಲಾವಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ



















