ಪುಣೆ : ಪದ್ಮಶ್ರೀ ಹಾಗೂ ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗಿಲ್ (82) ಅವರು ತಡರಾತ್ರಿ ಪುಣೆಯ ತಮ್ಮ ನಿವಾಸದಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ದೇಶದ ಖ್ಯಾತ ಪರಿಸರ ಚಿಂತಕ ಹಾಗೂ ತಜ್ಞರಲ್ಲಿ ಒಬ್ಬರಾಗಿದ್ದ ಮಾಧವ ಗಾಡ್ಗಿಲ್ ಪ್ರಧಾನಿ ಮಂತ್ರಿಗಳಿಗೆ ಪರಿಸರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ, ಪರಿಸರ ಇತಿಹಾದಲ್ಲಿ ಅಪಾರ ಜ್ಞಾನ ಹೊಂದಿದ್ದ ಇವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾಧವ ಗಾಡ್ಗಿಲ್ ಅವರು ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಪರಿಸರ ಇತಿಹಾಸದಲ್ಲಿ ಅಪಾರ ಜ್ಞಾನ ಹೊಂದಿದ್ದವರು. ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗಾಗಿ ನಡೆಸಿದ ಅಧ್ಯಯನ ಮತ್ತು ವರದಿ ಇಂದಿಗೂ ಪ್ರಸ್ತುತವಾಗಿದೆ. 2011ರಲ್ಲಿ ಸಲ್ಲಿಸಿದ ಗಾಡ್ಗಿಲ್ ವರದಿ ಪಶ್ಚಿಮ ಘಟ್ಟಗಳನ್ನು ಪರಿಸರ ಸಂವೇದನಾಶೀಲ ಪ್ರದೇಶವೆಂದು ಗುರುತಿಸಿ, ಗಣಿಗಾರಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಶಿಫಾರಸು ಮಾಡಿತ್ತು. ಈ ವರದಿ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು ಮತ್ತು ಇಂದಿಗೂ ಪರಿಸರ ಸಂರಕ್ಷಣೆಯಲ್ಲಿ ಮೈಲುಗಲ್ಲಾಗಿದೆ.
ಪ್ರಧಾನ ಮಂತ್ರಿಗಳ ಪರಿಸರ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ ಗಾಡ್ಗಿಲ್
ಗಾಡ್ಗಿಲ್ ಅವರು ಪ್ರಧಾನ ಮಂತ್ರಿಗಳ ಪರಿಸರ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಪರಿಸರ ಸಂರಕ್ಷಣೆಯಲ್ಲಿ ಅವರ ಕೊಡುಗೆ ಅಪಾರ. 1981ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಮತ್ತು 1983ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಅವರ ಕೃತಿಗಳು ಮತ್ತು ಅಧ್ಯಯನಗಳು ದೇಶದ ಪರಿಸರ ನೀತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.



















