ಬಳ್ಳಾರಿ : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಮನೆಗೆ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದಾರೆ. ನಿಮ್ಮೊಂದಿಗೆ ನಮ್ಮ ಸರ್ಕಾರ ಇರುತ್ತೆ, ನಮ್ಮ ಶಾಸಕರು ಇದ್ದಾರೆ ಎಂದು ಧೈರ್ಯ ತುಂಬಿದ್ದಾರೆ. ಈ ವೇಳೆ ಸಚಿವ ಜಮೀರ್‌ಗೆ ಶಾಸಕರಾದ ಭರತ್ ರೆಡ್ಡಿ ಮತ್ತು ಗಣೇಶ್ ಸಾಥ್ ನೀಡಿದ್ದಾರೆ.
ಈ ವೇಳೆ ಜಮೀರ್ ಬಳಿ ತಮ್ಮ ಮನೆಯವರಿಗೆ ನೌಕರಿ ಹಾಗೂ ಮನೆಗಾಗಿ ರಾಜಶೇಖರ್ ರೆಡ್ಡಿ ತಾಯಿ, ಸಹೋದರ ಹಾಗೂ ಸಹೋದರಿ ಮನವಿ ಮಾಡಿದ್ರು. ಈ ವೇಳೆ ಧೈರ್ಯ ತುಂಬಿದ ಜಮೀರ್ ಅಹ್ಮದ್, ಸರ್ಕಾರದಿಂದ ಮನೆ ಕಟ್ಟಿ ಕೊಡಿಸ್ತೀನಿ ಅಂತಾ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಜಮೀರ್, ಮೊನ್ನೆ ದಿನ ಘಟನೆಯಲ್ಲಿ ರಾಜಶೇಖರ ನಿಧನ ಹೊಂದಿದ್ದಾರೆ. ಮನೆ ನೋಡಿ ಬೇಜಾರಾಗಿದೆ, ಮನೆಗೆ ಅವ್ರೇ ದೊಡ್ಡ ಮಗ. ಮನೆಗೆ ರಾಜಶೇಖರ್‌ನೇ ಆಸರೆಯಾಗಿದ್ದ. ತಂದೆ ಹೋಟೆಲ್ ಇಟ್ಟುಕೊಂಡಿದ್ರು. ಇದೀಗ ನಾನು ಭರತ್, ಗಣೇಶ್ ಸೇರಿ ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಟೋ ಎಕ್ಸ್‌ಕ್ಲೂಸಿವ್ | ಭಾರತದ ರಸ್ತೆಗಳಿಗೆ ಲಗ್ಗೆ ಇಟ್ಟ ಎರಡನೇ ತಲೆಮಾರಿನ ‘ಕಿಯಾ ಸೆಲ್ಟೋಸ್’.. ಬೆಲೆ 10.99 ಲಕ್ಷದಿಂದ ಆರಂಭ!



















