ಬೆಂಗಳೂರು : ಸಂಬಳ ಹೆಚ್ಚಳ, ಬಡ್ತಿ ಸೇರಿ ಹಲವು ಕಾರಣಗಳಿಂದಾಗಿ ಖಾಸಗಿ ಕಂಪನಿ ಉದ್ಯೋಗಿಗಳು ಕಂಪನಿಯನ್ನು ಬದಲಾಯಿಸುತ್ತಲೇ ಇರುತ್ತಾರೆ. ಆದರೆ, ಹೊಸ ಕಂಪನಿ ಸೇರಿದಾಗ ಇಪಿಎಫ್ಒದ ಹಳೆಯ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಹೊಸ ಕಂಪನಿಗೆ ನೀಡದಿದ್ದರೆ, ಹೊಸ ಕಂಪನಿಯಲ್ಲಿ ಪಿಎಫ್ ಜಮೆಯಾಗಲು ಹೊಸ ಯುಎಎನ್ ಸಂಖ್ಯೆ ಕ್ರಿಯೇಟ್ ಮಾಡಲಾಗುತ್ತದೆ. ಇದರಿಂದ ಉದ್ಯೋಗಿಗಳಿಗೆ ಬಡ್ಡಿ ನಷ್ಟವಾಗುತ್ತದೆ.
ಹೌದು, ಒಬ್ಬ ವ್ಯಕ್ತಿ ಎರಡು ಯುಎಎನ್ ಸಂಖ್ಯೆ ಹೊಂದಿದ್ದರೆ ಹಲವು ಸಮಸ್ಯೆ ಎದುರಾಗುತ್ತವೆ. ಉದ್ಯೋಗಿಯು ಹೊಸ ಕಂಪನಿಯಲ್ಲಿ ಮೂರು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಅವಧಿಗೆ ಕೆಲಸ ಮಾಡಿದರೆ, ಹಳೆಯ ಯುಎಎನ್ ಖಾತೆಯಲ್ಲಿರುವ ಪಿಎಫ್ ಮೊತ್ತಕ್ಕೆ ಬಡ್ಡಿ ಜಮೆಯಾಗುವುದಿಲ್ಲ. ಅಲ್ಲದೆ, ಹಳೆಯ ಯುಎಎನ್ ಸಂಖ್ಯೆೆಯು ನಿಷ್ಕ್ರಿಯವಾಗುತ್ತದೆ. ಬಡ್ಡಿ ಗಳಿಕೆಯ ಹಣಕ್ಕೆ ತೆರಿಗೆ ವಿಧಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ನೀವು ಎರಡು ಯುಎಎನ್ ಸಂಖ್ಯೆಗಳನ್ನು ಹೊಂದಿದ್ದರೆ, ಕೂಡಲೇ ಅವುಗಳನ್ನು ಮರ್ಜ್ ಮಾಡುವುದು ಒಳಿತು.
ಎರಡು ಯುಎಎನ್ ಸಂಖ್ಯೆಗಳನ್ನು ಮರ್ಜ್ ಮಾಡುವುದು ಹೇಗೆ?
- ಮೊದಲಿಗೆ https://unifiedportal-mem.epfindia.gov.in/ ಪೋರ್ಟಲ್ ಗೆ ಭೇಟಿ ನೀಡಿ
- ಆನ್ ಲೈನ್ ಸರ್ವಿಸಸ್ ವಿಭಾಗಕ್ಕೆ ತೆರಳಿ, ಒನ್ ಮೆಂಬರ್ ಒನ್ ಇಪಿಎಫ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಸ್ವವಿವರವನ್ನು ಭರ್ತಿ ಮಾಡಿ
- ಮೆಂಬರ್ ಐಡಿ ಅಥವಾ ಹಳೆಯ ಯುಎಎನ್ ನಮೂದಿಸಿ, ಗೆಟ್ ಡಿಟೇಲ್ಸ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ
- ಈಗಿನ ಅಥವಾ ಹಳೆಯ ಕಂಪನಿಯ ಯುಎಎನ್ ಆಯ್ಕೆ ಮಾಡಿಕೊಳ್ಳಿ, ಒಟಿಪಿಗೆ ಮನವಿ ಮಾಡಿ
- ಒಟಿಪಿ ನಮೂದಿಸಿ, ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ
- ಇದಾದ ಬಳಿಕ ಟ್ರ್ಯಾಕಿಂಗ್ ಐಡಿ ಜನರೇಟ್ ಆಗುತ್ತದೆ, ನಿಮ್ಮ ಟ್ರಾನ್ಸ್ ಫರ್ ಮನವಿಯನ್ನು ಪರಿಗಣಿಸಲಾಗುತ್ತದೆ
- ಸುಮಾರು 20-30 ದಿನಗಳೊಳಗೆ ನಿಮ್ಮ ಎರಡು ಯುಎಎನ್ ಗಳು ಒಂದೇ ಸಂಖ್ಯೆಗೆ ಮರ್ಜ್ ಆಗುತ್ತವೆ
ಇದನ್ನೂ ಓದಿ : ‘MGNREGA’ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ಕರೆ | ಜನವರಿ 5ರಿಂದ ಅಭಿಯಾನ



















