ಬೆಂಗಳೂರು : ಶ್ರೀ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ರವರ 101ನೇ ಜನ್ಮ ದಿನಾಚರಣೆ ಅಂಗವಾಗಿ ಸಂಜಯ್ ನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ವಿಶೇಷ ಎನ್ನುವಂತೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀವನಗಾಥೆ ಸಾರುವ ಬ್ಯಾನರ್‌ಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ. ದೀಪ ಬೆಳಗಿಸುವುದರ ಮೂಲಕ ಗಣ್ಯರಿಂದ ಕಾರ್ಯಕಮ ಉದ್ಘಾಟನೆ ಮಾಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಕರ್ಣಾಕರ್ ಸ್ವಯಂ ಸೇವಾ ಸಂಘದ ಅಧ್ಯಕ್ಷರು ಬೆಂಗಳೂರು ಮಹಾನಗರ, ಮಾಜಿ ಶಾಸಕರು ವೈ ಎ ನಾರಾಯಣಸ್ವಾಮಿ, ಎಸ್ ಎಸ್ ಪಾಟೀಲ್ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕರು ಇನ್ನೂ ಮುಂತಾದ ಗಣ್ಯವ್ಯಕ್ತಿಗಳು ಹಾಗೂ ಸ್ವಾಮಿ ವಿವೇಕಾನಂದ ಟ್ರಸ್ಟ್ ಸದಸ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮದ ನಂತರ ಮಾತಾಡಿದ ಮಾಜಿ ಮುಖ್ಯಮಾತ್ರಿ ಸದಾನಂದ ಗೌಡ. ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಆದರ್ಶಗಳು ಮತ್ತು ಅವರ ಯೋಜನೆಗಳನ್ನ ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಉತ್ತಮ ಸಮಾಜ ಕಟ್ಟಬಹುದು ಮತ್ತು ಅದೇ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೆಲಸ ಮಾಡ್ತಿದೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ : ಯೋಧರಿಗೆ ಇನ್‌ಸ್ಟಾಗ್ರಾಂ ಬಳಕೆಗೆ ಹಸಿರು ನಿಶಾನೆ : ಕೇವಲ ವೀಕ್ಷಣೆಗಷ್ಟೇ, ಪೋಸ್ಟ್ ಮಾಡುವಂತಿಲ್ಲ!



















