ಲಖನೌ : ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸಿದ್ಧಾರ್ಥ್ ರಾಯ್ ಎಂಬ ವ್ಯಕ್ತಿ ತನ್ನ ತಂಗಿಯ ಮದುವೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಸ್ಮರಣೀಯವಾಗಿಸಿದ್ದಾರೆ. ವಿವಾಹ ಸಂಭ್ರಮಕ್ಕೆ ಸಿದ್ಧಾರ್ಥ್ ತಮ್ಮ ಊರಿನ ಬೀದಿ ಬದಿಯ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂಭ್ರಮದಲ್ಲಿ ಅತಿಥಿಗಳು ಪಾಲ್ಗೊಂಡು ಮನಸಾರೆ ಕುಣಿದಿದ್ದಾರೆ. ”ನಮ್ಮ ಜೀವನದಲ್ಲಿ ಇಂತಹ ಸತ್ಕಾರ ಮತ್ತು ಗೌರವ ಎಂದೂ ಸಿಕ್ಕಿರಲಿಲ್ಲ” ಎಂದು ಅವರು ಭಾವುಕರಾಗಿದ್ದಾರೆ. ಮದುವೆ ಮುಗಿದ ನಂತರ ಎಲ್ಲರಿಗೂ ‘ರಿಟರ್ನ್ ಗಿಫ್ಟ್’ ನೀಡಿ ಸಿದ್ಧಾರ್ಥ್ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.
ವಿಡಿಯೊವನ್ನು ಸಿದ್ಧಾರ್ಥ್ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಜಿಲ್ಲೆಯ ಭಿಕ್ಷುಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದು ಇದಕ್ಕಿಂದ ದೊಡ್ಡದಾದ ಆಶೀರ್ವಾದ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ಜನರು ಈ ಮದುವೆಗೆ ಹಾರೈಸಿದ್ದಾರೆ.
ಇದನ್ನೂ ಓದಿ : ಪಟ್ಟಣ ಪಂಚಾಯತ್ ಚುನಾವಣೆ | ಬಿಜೆಪಿಗೆ ಭರ್ಜರಿ ಜಯ



















