ಕೋಲಾರ : ಥಿನ್ನರ್ ದ್ರವ ಸೇವಿಸಿ 3 ವರ್ಷದ ಮಗು ಸಾವನ್ನಪ್ಪಿರುವ ದರ್ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಝಾನ್ಸಿ (03) ಸಾವನ್ನಪ್ಪಿರುವ ಮಗು. ನೀರು ಎಂದು ಭಾವಿಸಿ, ಮನೆಯಲ್ಲಿನ ಬಾಟಲ್‌ನಲ್ಲಿದ್ದ ಪೇಯಿಂಟ್‌ಗೆ ಮಿಶ್ರಣ ಮಾಡುವ ಥಿನ್ನರ್ ದ್ರವ ಸೇವಿಸಿದ್ದಾಳೆ. ಬಳಿಕ ಮಗು ಪ್ರಜ್ಙೆ ತಪ್ಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಸದ್ಯ ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ | ಆಕಸ್ಮಿಕವಾಗಿ ಧಗಧಗನೇ ಹೊತ್ತಿ ಉರಿದ ಅಂಗಡಿಗಳು



















