ಬೆಂಗಳೂರು | ಬೆಂಗಳೂರಿನಲ್ಲಿ ವ್ಹೀಲಿಂಗ್ ಹುಚ್ಚು ಇದೀಗ ಮತ್ತೆ ಶುರುವಾಗಿದೆ. 28 ವರ್ಷದ ಆಟೋ ರಿಕ್ಷಾ ಚಾಲಕ ವ್ಹೀಲಿಂಗ್ ಮಾಡಲು ಹೋಗಿ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ಕೆಆರ್ ಪುರಂನ ಪ್ಲೇಗ್ ಮಾರಮ್ಮ ಬೀದಿಯ ನಿವಾಸಿ ಉದಯ್ ವಿಕ್ರಮ್ ಎ ಎಂಬ ಆರೋಪಿಯ ವಿರುದ್ಧ ಕಾನೂನಿನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉದಯ್ ವಿಕ್ರಮ್ ಎ ತಾನು ಮಾಡಿದ ವ್ಹೀಲಿಂಗ್ ಸ್ಟಂಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಸಾರ್ವಜನಿಕ ಮಾರ್ಗದಲ್ಲಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ/ಸವಾರಿ) ಸೆಕ್ಷನ್ 281, ಜೊತೆಗೆ ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 (ಅಪಾಯಕಾರಿ ಚಾಲನೆ) ಮತ್ತು 189 (ರೇಸಿಂಗ್/ವೇಗದ ಪ್ರಯೋಗಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿ | ಕಿರು ಸೇತುವೆಗೆ ಕಾರು ಡಿಕ್ಕಿ.. ಮೂವರು ಸ್ಥಳದಲ್ಲೇ ಸಾವು



















