ದಾವಣಗೆರೆ: ದಾವಣಗೆರಯ ವಿನಾಯಕ ಬಡವಣೆಯ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಸೆ ತೋರಿಸಿ ಸೈಬರ್ ವಂಚಕರು 76.48 ಲಕ್ಷ ರೂ. ಪಂಗನಾಮ ಹಾಕಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಗೆ ಫೇಸ್‍ಬುಕ್ ಮೂಲಕ ಪರಿಚಯವಾದ ವಂಚಕ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಸೆ ಹುಟ್ಟಿಸಿದ್ದ. ವಂಚಕನ ಮಾತು ನಂಬಿ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ವಿವಿಧ ಬ್ಯಾಂಕ್‌ಗಳಿಂದ ಹಣ ವರ್ಗಾವಣೆ ಮಾಡಿದ್ದಾರೆ.
ಕೆಲ ದಿನಗಳ ಕಾಲ ಬಿಟ್ಟು ಹಣ ವಾಪಸ್ ಪಡೆಯಲು ಹೋದಾಗ ಹಣ ಬಾರದೇ ಇದ್ದಾಗ ವಂಚನೆ ಜಾಲಕ್ಕೆ ಸಿಲುಕಿದ್ದು ಗೊತ್ತಾಗಿದೆ. ವಂಚನೆಗೊಳಗಾಗಿದ್ದು ಗೊತ್ತಾಗುತ್ತಿದ್ದಂತೆ ವ್ಯಕ್ತಿ ದಾವಣಗೆರೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ | ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ : ಆರೋಪಿ ಸೆರೆ



















