ಬೆಂಗಳೂರು: ಅಭಯ ಸೇವಾ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಡಿ. 19ರಿಂದ 21ರವರಗೆ ಮೂರು ದಿನಗಳ ಕಾಲ ನಗರದ ರಾಜಾಜಿನಗರದ ಶ್ರೀರಾಮಮಂದಿರ ಮೈದಾನದಲ್ಲಿ ಆಯೋಜಿಸಲಾಗಿರುವ ‘ಸೇವಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಹಲವು ಸಾಮಾಜಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಜರುಗಿಸಲಾಗುವುದು.
ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾದ ಉಮೇಶ್ ಶೆಟ್ಟಿ ಎಂ. ಬಿ ಅವರ ಅಭಯ ಸೇವಾ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಾರ್ಷಿಕ ಸಡಗರದೊಂದಿದೆಗೆ, ನವಶಕ್ತಿ ವೈಭವ, ನೃತ್ಯ, ಹುಲಿ ಹೆಜ್ಜೆ, ಆರೋಗ್ಯ ಶಿಬಿರ, ಶಾಲಾ ಬ್ಯಾಗ್, ಹೊದಿಕೆ ವಿತರಣೆ , ಪಂಜಿನ ಮೆರಣಿಗೆ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇಂದು ಕಾರ್ಯಕ್ರಮದ ಕೊನೆಯ ದಿನವಾಗಿದ್ದು, ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಶಾಸಕರಾದ ಸುರೇಶ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಸಂಸದರಾದ ಪಿ.ಸಿ.ಮೋಹನ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಅಮೆರಿಕ ಸರ್ಕಾರದ ವೆಬ್‌ಸೈಟ್‌ನಿಂದ ಎಪ್‌ಸ್ಟೀನ್ ಫೈಲ್‌ಗಳು ನಾಪತ್ತೆ : ಟ್ರಂಪ್ ಫೋಟೋ ಕೂಡ ಮಾಯ!



















