ಕೋಲಾರ : ಸಿಎಂ ಪುತ್ರನಾಗಿ ಯತೀಂದ್ರ ಅವರ ಹೇಳಿಕೆ ತಪ್ಪು. ಸಿಎಂ ಹಾಗು ಡಿಸಿಎಂ ಪರವಾಗಿ ಮಾತನಾಡೋ ಶಾಸಕರು ಇದ್ದಾರೆ. ಯತೀಂದ್ರ ಅವರು ಸಿಎಂಗೆ ಸರ್ಟಿಫಿಕೇಟ್ ಕೊಡೋದು ಬೇಕಾಗಿಲ್ಲ , ಸಿಎಂ ಗೆ ರಾಷ್ಟೀಯ ನಾಯಕರಾಗೊ ಅರ್ಹತೆ ಇದೆ ಎಂದು ಶಾಸಕ ನಂಜೇಗೌಡ ಹೇಳಿದ್ದಾರೆ.
ಕೋಲಾರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ, ಸಿಎಂ ಗೆ ರಾಷ್ಟೀಯ ನಾಯಕರಾಗೊ ಅರ್ಹತೆ ಇದೆ. ಯತೀಂದ್ರ ಅವರು ಸರ್ಟಿಫಿಕೇಟ್ ಕೊಡೋದು ಬೇಕಾಗಿಲ್ಲ ನಾಯಕತ್ವ ಚರ್ಚೆ ಬಗ್ಗೆ ಯಾವ ಶಾಸಕರು ಮಾತನಾಡಬಾರದು. ಶೀಘ್ರದಲ್ಲೆ ಹೈಕಮಾಂಡ್ ಈ ಬಗ್ಗೆ ತೆರೆ ಎಳೆಯಲಿದೆ. CM ಹಾಗು DCM ಹೈಕಮಾಂಡ್ ವಿರುದ್ಧ ಹೋಗೋರಲ್ಲ ಎಂದು ಹೇಳಿದ್ದಾರೆ.
ಡಿನ್ನರ್ ಮೀಟಿಂಗ್ ವಿಚಾರ
ಬೆಳಗಾವಿಯಲ್ಲಿ ರಾತ್ರಿ ನಡೆದ ಡಿನ್ನರ್ ಪಾಲಿಟಿಕ್ಸ್, ಡಿಸಿಎಂ ಮಾಡಿದ್ದಲ್ಲ, ಅಲ್ಲಿನ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ವ್ಯವಸ್ಥೆ ಮಾಡಿದ್ದು, ಎಂಎಲ್‌ಎಗಳು ಮಾತಾಡಬಾರದು ಅಂತ ಹೈಕಮಾಂಡ್ ಸೂಚನೆ ಇದೆ. ಬೆಳಗಾವಿ CLP ಮೀಟಿಂಗ್ ನಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಆಗಿದ್ದು ನಿಜ. ಈ ವಿಚಾರ CLP ಮೀಟಿಂಗ್ ನ ಗುಟ್ಟು ಹೇಗೆ ಹೊರಗೆ ಬಂತು ಅನ್ನೋದು ಗೊತ್ತಾಗ್ತಿಲ್ಲ. ಉಳಿದ ಎರಡೂವರೆ ವರ್ಷ ಅಭಿವೃದ್ಧಿ ಕೆಲಸಕ್ಕೆ ಸಹಾಯ ಮಾಡಿ ಅಂತ ಕೇಳಿದ್ದು ನಿಜ. ಎಂದು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಿದನ್ನೂ ಓದಿ : ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ | ಡೆಲಿವರಿ ಬಾಯ್ ವೇಷದಲ್ಲಿ ಬಂದ ಖದೀಮರು ; ಸಿಸಿಟಿವಿಯಲ್ಲಿ ದೃಶ್ಯ ಸೆರೆ



















