ಬೆಂಗಳೂರು : ಬಾರ್‌ಗೆ ಹೋಗಿದ್ದ ಯುವಕ ಅನುಮಾನಸ್ಪದ ಸಾವಾಗಿರುವ ಘಟನೆ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದನ್ (27), ಅನುಮಾನಸ್ಪದವಾಗಿ ಮೃತಪಟ್ಟ ಯುವಕ. ಮೊನ್ನೆ ಸಂಜೆ ಸ್ನೇಹಿತರ ಜತೆ ಬಾರ್‌ಗೆ ಹೋಗಿದ್ದ ಆದರೆ ಸ್ಟೇರ್ ಕೇಸ್ ನಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲಿಂದ ಕುಟುಂಬಸ್ಥರು ಮದನ್ ನನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಆತನ ಮರ್ಮಾಂಗ ಊದಿಕೊಂಡು, ಯೂರಿನ್ ಬ್ಲಾಕ್ ಆಗಿತ್ತು. ತಕ್ಷಣ ಮದನ್ ನನ್ನ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಯ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ.
ಮಗನ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ತಾಯಿ ದೂರು ನೀಡಿದ್ದು, UDR ದಾಖಲಿಸಿ ಜೀವನ್ ಭೀಮಾ ನಗರ ಪೊಲೀಸರಿಂದ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಅಣಕು ಹರಾಜು : ಕೆಕೆಆರ್ ಸೋಲಿಸಿ 21 ಕೋಟಿ ರೂ.ಗೆ ಕ್ಯಾಮರೂನ್ ಗ್ರೀನ್ ಖರೀದಿಸಿದ ಸಿಎಸ್‌ಕೆ!



















