ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಹೊಸ ಏಕದಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಬೆಳವಣಿಗೆ ಕಂಡಿದ್ದಾರೆ.
ಕಳೆದ ವಾರದವರೆಗೆ ಅವರು 4ನೇ ಸ್ಥಾನದಲ್ಲಿದ್ದ ವಿರಾಟ್, ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರ ಫಲವಾಗಿ ಇದೀಗ ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ರೋಹಿತ್ ಶರ್ಮಾ ತಮ್ಮ ಅಗ್ರ ಸ್ಥಾನವನ್ನು ಸುಭದ್ರವಾಗಿ ಕಾಪಾಡಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಇದೀಗ ಎರಡು ಸ್ಥಾನಕ್ಕೆ ಪ್ರವೇಶ ಮಾಡುವ ಮೂಲಕ 773 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 781 ಅಂಕಗಳೊಂದಿಗೆ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ
1.ರೋಹಿತ್ ಶರ್ಮಾ (ಭಾರತ): 781
2.ವಿರಾಟ್ ಕೊಹ್ಲಿ (ಭಾರತ): 773
3.ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್): 766
4.ಇಬ್ರಾಹಿಂ ಝರ್ಡಾನ್ (ಅಫ್ಘಾನಿಸ್ತಾನ): 764
5.ಶುಭಮನ್ ಗಿಲ್ (ಭಾರತ): 723
6.ಬಾಬರ್ ಆಝಮ್ (ಪಾಕಿಸ್ತಾನ): 722
7.ಹ್ಯಾರಿ ಟೆಕ್ಟರ್ (ಐರ್ಲೆಂಡ್): 705
8.ಶೇಯ್ ಹೋಪ್ (ವೆಸ್ಟ್ ಇಂಡೀಸ್): 701
9.ಚರಿತ ಅಸಲಂಕಾ (ಶ್ರೀಲಂಕಾ): 690
10.ಶ್ರೇಯಸ್ ಅಯ್ಯರ್ (ಭಾರತ): 679
ಇದನ್ನೂ ಓದಿ : ಉಡುಪಿ | ಭೀಕರ ಕಾರು ಅಪಘಾತದಲ್ಲಿ ಯುವ ಉದ್ಯಮಿ ಸಾವು



















