ನವದೆಹಲಿ : ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ನಾಳೆಯಿಂದ (ಡಿ.9) ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನು ದ್ವಿತೀಯ ಪಂದ್ಯಕ್ಕೆ ಚಂಡೀಗಢದ ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಧರ್ಮಶಾಲಾ ಹಾಗೂ ಲಕ್ನೋದಲ್ಲಿ ಜರುಗಲಿದೆ. ಕೊನೆಯ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅತಿಥ್ಯವಹಿಸಲಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಸೌತ್ ಆಫ್ರಿಕಾ ತಂಡದ ನಾಯಕನಾಗಿ ಐಡೆನ್ ಮಾರ್ಕ್ರಾಮ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಪಂದ್ಯ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆಯು 6.30ಕ್ಕೆ ನಡೆಯಲಿದೆ. ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದ್ದು, ಜಿಯೋ ಹಾಟ್ ಸ್ಟಾರ್ ವೆಬ್ಸೈಟ್ ಹಾಗೂ ಆ್ಯಪ್ನಲ್ಲಿ ಪಂದ್ಯ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ :
- ಮೊದಲ ಟಿ20 ಪಂದ್ಯ – ಡಿಸೆಂಬರ್ 9 –ಕಟಕ್
- ಎರಡನೇ ಟಿ20 ಪಂದ್ಯ – ಡಿಸೆಂಬರ್ 11 – ಚಂಡೀಗಢ್
- ಮೂರನೇ ಟಿ20 ಪಂದ್ಯ – ಡಿಸೆಂಬರ್ 14 – ಧರ್ಮಶಾಲಾ
- ನಾಲ್ಕನೇ ಟಿ20 ಪಂದ್ಯ – ಡಿಸೆಂಬರ್ 17 – ಲಕ್ನೋ
- ಐದನೇ ಟಿ20 ಪಂದ್ಯ – ಡಿಸೆಂಬರ್ 19 – ಅಹಮದಾಬಾದ್.
ಇದನ್ನೂ ಓದಿ : ಭಾರತಕ್ಕೂ ಬಂತು ಸ್ಟಾರ್‌ಲಿಂಕ್ ಇಂಟರ್‌ನೆಟ್ | 30 ದಿನದ ಫ್ರೀ ಟ್ರಯಲ್ ಜೊತೆ ರಿಚಾರ್ಜ್ ಘೋಷಿಸಿದ ಮಸ್ಕ್ ಕಂಪನಿ!


















