ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಮತ್ತೆ ಬೀದಿ ನಾಯಿಗಳಿಗೆ ಬಂಪರ್ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ಪ್ರತಿನಿತ್ಯ ಎರಡು ಬಾರಿ ಚಿಕನ್ ಭಾಗ್ಯ ದೊರೆಯಲಿದೆ.
ಈ ಹಿಂದೆ ಜಿಬಿಎ ದಿನಕ್ಕೆ ಒಂದು ಬಾರಿ ಬಿರಿಯಾನಿ ಊಟ ನೀಡುವುದಕ್ಕೆ ಮುಂದಾಗಿತ್ತು. ಭಾರೀ ವಿರೋಧದ ನಡುವೆಯು ಈಗ ಪ್ರತಿನಿತ್ಯ ಎರಡು ಬಾರಿ ಬಿರಿಯಾನಿ ಭಾಗ್ಯ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಸರ್ಕಾರಿ ಕಛೇರಿ, ಶಿಕ್ಷಣ ಸಂಸ್ಥೆಗಳಲ್ಲಿ, ಅಸ್ಪತ್ರೆ ಗಳಲ್ಲಿ, ಸ್ಟೇಡಿಯಂಗಳಲ್ಲಿ ಸೇರಿದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಿ ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಜಿಬಿಎ ಅಧಿಕಾರಿಗಳು ಸುಪ್ರೀಂ ಕೋರ್ಟ್ ಅದೇಶದ ಅನ್ವಯ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಿ, ನಿತ್ಯ ಎರಡು ಬಾರಿ ಚಿಕನ್ ರೈಸ್ ನೀಡುವುದಕ್ಕೆ ಮುಂದಾಗಿದೆ.
ಇನ್ನೂ ಚಿಕನ್ ಬಿರಿಯಾನಿ ನಿಡುವುದರಲ್ಲಿ ಬೆಲೆ ಕೂಡ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ಜಿಬಿಎ ಚಿಕನ್ ಭಾಗ್ಯಕ್ಕೆ ಒಂದು ನಾಯಿಗೆ, ಒಂದು ಊಟಕ್ಕೆ 22.42 ರೂ ನಿಗದಿ ಮಾಡಿತ್ತು. ಅದರೆ ಈಗ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ನೆಪ ಹೇಳಿ ದರ ಏರಿಕೆ ಮಾಡಿದೆ. ಈ ಬಾರಿ ಒಂದು ನಾಯಿಗೆ ಒಂದು ಬಾರಿ ಊಟಕ್ಕೆ 25 ರೂ. ನಿಗದಿ ಮಾಡಿದ್ದು, ಒಂದು ದಿನ ಒಂದು ನಾಯಿಗೆ 50ರೂ. ಖರ್ಚು ಆಗಲಿದೆ.
ಅದರಲ್ಲಿ ಅಕ್ಕಿ 150 ಗ್ರಾಂ, ಚಿಕನ್ 100 ,ಗ್ರಾಂ ತರಕಾರಿ 100 ಗ್ರಾಂ. ಪ್ರತಿ ತಿಂಗಳು ಒಂದು ನಾಯಿಗೆ 3035 ಅಗಲಿದ್ದು, ಸಿಬ್ಬಂದಿ ವೇತನ. ಔಷಧಿ, ಸ್ವಚ್ಚತೆ, ಅಡಳಿತ ವೆಚ್ಚ ಎಲ್ಲಾ ಸೇರಿ 3038 ರೂ.ಆಗಲಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಸೂಚನೆಯಂತೆ 2206 ಬೀದಿ ನಾಯಿಗಳನ್ನು ಗುರುತು ಮಾಡಿದ್ದು, ಈ ಪ್ರಕಾರ ಪ್ರತಿ ತಿಂಗಳಿಗೆ 66.95 ಲಕ್ಷ ಹಾಗೂ ವಾರ್ಷಿಕವಾಗಿ 8.03 ಕೋಟಿ ವೆಚ್ಚವಾಗಲಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಬೀದಿನಾಯಿಗಳಿವೆ?
– ಬೆಂ. ಕೇಂದ್ರ ಪಾಲಿಕೆ 222
– ಬೆಂ. ಪೂರ್ವ ಪಾಲಿಕೆ 193
– ಬೆಂ. ಪಶ್ಚಿಮ ಪಾಲಿಕೆ 37
– ಬೆಂ. ಉತ್ತರ ಪಾಲಿಕೆ 1623
– ಬೆಂ. ದಕ್ಷಿಣ ಪಾಲಿಕೆ 131
ಬೀದಿ ನಾಯಿಗಳಿಗೆ ಆಶ್ರಯ ಎಲ್ಲೆಲ್ಲಿ..?
– ಬೆಂ. ಕೇಂದ್ರ ಪಾಲಿಕೆ – ಕಂಟೋನ್ಮೆಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣ
– ಬೆಂ. ಪೂರ್ವ ಪಾಲಿಕೆ- ಸಾದಮಂಗಲ ಮತ್ತು ವರ್ತೂರಿನಲ್ಲಿ ಆಶ್ರಯ ತಾಣ
– ಬೆಂ. ಪಶ್ಚಿಮ ಪಾಲಿಕೆ – ಕೊಟ್ಟಿಗೆಪಾಳ್ಯದ ನಿರಾಶ್ರಿತ ತಾಣ
– ಬೆಂ. ಉತ್ತರ ಪಾಲಿಕೆ- ಅಂಬೇಡ್ಕರ್ ನಗರ
– ಬೆಂ. ದಕ್ಷಿಣ ಪಾಲಿಕೆ- ಎಸ್. ಬಿಂಗಿಪುರ
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಗುದ್ದಿದ ಕಾರು | ತಪ್ಪಿದ ಭಾರೀ ಅನಾಹುತ


















