ದರ್ಶನ್ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೆ ಸುದೀಪ್ ಅವರ ಹೊಸ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಸುದೀಪ್ ಅವರ ‘ಮಾರ್ಕ್’ ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೀಗ ಸಿನಿಮಾದ ಟ್ರೈಲರ್ ಔಟ್ ಆಗಿದೆ.
ಟ್ರೈಲರ್ ಮಾತ್ರ ಸಖತ್ ಮಾಸ್ ಆಗಿದೆ. ಖದರ್ ಲುಕ್‌ನಲ್ಲಿ ಮಾಸ್ ಆ್ಯಕ್ಷನ್ ಮೂಲಕ ಅಬ್ಬರಿಸಿದ್ದಾರೆ. ಟ್ರೈಲರ್ ಮೂಲಕ ಇಂದೊಂದು ಸಸ್‌ಫೆನ್ಸ್ ಸಿನಿಮಾದ ಅಂತಾ ಹೇಳಬಹುದು. ಕಿಚ್ಚನ ಖದರ್ ಲುಕ್‌ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದೆ. “ಟ್ರೈಲರ್‌ನಲ್ಲಿ ಕಿಚ್ಚನ ಅಬ್ಬರ ನೋಡಿದ ಬಳಿಕ ‘ಮಾರ್ಕ್’ ಸಿನಿಮಾ ಮೇಲಿದ್ದ ನಿರೀಕ್ಷೆ ಡಬಲ್ ಆಗಿದೆ. ಈ ಮೊದಲು ರಿಲೀಸ್ ಆಗಿದ್ದ ಚಿತ್ರದ ಇಂಟ್ರೋ ಟೀಸರ್‌ನಲ್ಲಿ ಆ್ಯಕ್ಷನ್ ಮಿಸ್ ಆಗಿತ್ತು. ಈಗ ಟ್ರೈಲರ್‌ನಲ್ಲಿ ಕಿಚ್ಚ ಸುದೀಪ್ ಅವರು ಆ್ಯಕ್ಷನ್ ಮೂಲಕ ಅಬ್ಬರಿಸಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳಂ ಚಿತ್ರರಂಗದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಸ್ಟಾರ್ ಕಲಾವಿದರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ನಲ್ಲಿ ಎಲ್ಲ ಪಾತ್ರಗಳ ಝಲಕ್ ತೋರಿಸಲಾಗಿದೆ.
ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಅಂದರೆ ಅವರ ಸಿನಿಮಾದ ಮೇಲೆ ಅಭಿಮಾನಿಗಳು ತುಂಬಾ ಎಕ್ಸಾಪೆಟೇಶನ್ ಇಟ್ಟಿರುತ್ತಾರೆ. ಅದರಂತೆ ಕಿಚ್ಚ ಡಿಸೆಂಬರ್ 25ರಂದು ಕ್ರಿಸ್ಮಸ್ ಪ್ರಯುಕ್ತ ಮಾರ್ಕ್ ಸಿನಿಮಾ ಉಡುಗೊರೆಯಾಗಿ ತೆರೆಗೆ ಬರಲಿದೆ. ಈಗ ರಿಲೀಸ್ ಆದ ಟ್ರೈಲರ್ ಮೂಲಕ ಮಾರ್ಕ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶನ ಮಾಡಿದ್ದು ಫ್ಯಾನ್ಸ್‌ಗೆ ಟ್ರೈಲರ್ ಮೂಲಕ ಸಖತ್ ಧಮಾಕ ನೀಡಿದ್ದಾರೆ.‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಆ್ಯಕ್ಷನ್ ಅಬ್ಬರ ಇರಲಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ.ಮಾರ್ಕ್ ಸಿನಿಮಾದ ಟ್ರೈಲರ್ ನೋಡಿದ ಫ್ಯಾನ್ಸ್‌ಗಳಿಂದ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಪತಿಯ 2ನೇ ಮದುವೆಗೆ ತಯಾರಿ : ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪಾಕ್ ಮಹಿಳೆ ಕಣ್ಣೀರಿನ ಮನವಿ


















