ವಿಜಯನಗರ: ಕಲ್ಟ್ ಸಿನಿಮಾ ರಿಲೀಸ್ ಒಳಗಡೆ ನಟ ದರ್ಶನ ಅವರು ಜೈಲಿಂದ ಹೊರಗೆ ಬರುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದು ನಟ ಝೈದ್ ಖಾನ್ ಹೇಳಿದ್ದಾರೆ.
ಜನವರಿ 23ರಂದು ಕಲ್ಟ್ ಸಿನಿಮಾ ಬಿಡುಗಡೆ ಹಿನ್ನೆಲೆ ಪ್ರಚಾರಾರ್ಥವಾಗಿ ಹೊಸಪೇಟೆಗೆ ಆಗಮಿಸಿದ ಸಚಿವ ಜಮೀರ್ ಪುತ್ರ ಕಲ್ಟ್ ಸಿನಿಮಾದ ನಟ ಝೈದ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ ಅಣ್ಣ ಆದಷ್ಟು ಬೇಗ ಜೈಲಿಂದ ಹೊರಗೆ ಬರಲಿ ಎಂದು ಪ್ರತಿ ದಿನ, ಪ್ರತಿ ಕ್ಷಣ ಪ್ರಾರ್ಥನೆ ಮಾಡುತ್ತಾ ಇದ್ದೇನೆ.
ದರ್ಶನ ಅವರನ್ನು ನಾನು ಬಾಯಿ ಮಾತಿನಿಂದ ಅಣ್ಣ ಎಂದು ಕರೆಯುವುದಿಲ್ಲ. ನಿಜ ಜೀವನದಲ್ಲಿ ನಂಗೆ ಅಣ್ಣ ಎಂದು ಯಾರು ಇಲ್ಲ. ಆ ಜಾಗವನ್ನು ದರ್ಶನ ಅವರು ತುಂಬಿಕೊಂಡು ಕರ್ತವ್ಯ ನಿರ್ವಹಿಸಿದರು. ಅವರು ಈಗ ಜೈಲಲ್ಲಿ ಇರುವುದು ಬೇಜಾರಾಗುತ್ತದೆ. ನನ್ನ ಮೊದಲನೇ ಸಿನಿಮಾಕ್ಕೆ ನನಗೆ ಅಣ್ಣನ ಹಾಗೇ ದರ್ಶನ ಅವರು ಬೆನ್ನೆಲುಬಾಗಿ ನಿಂತಿದ್ದರು. ಈಗ ಎರಡನೇ ಸಿನಿಮಾದ ವೇಳೆ ಇಲ್ಲದೇ ಇರುವುದು ಬಹಳ ಬೇಜಾರಾಗಿದೆ. ಅವರು ಇದ್ದಿದ್ದರೆ ನನಗೆ ಎನರ್ಜಿ ಜಾಸ್ತಿಯಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ನಾನು ದರ್ಶನ ಅವರನ್ನು ಜೈಲಿಗೆ ಹೋಗಿ ಭೇಟಿ ಆಗಿರಲಿಲ್ಲ. ಸಿನಿಮಾ ರಿಲೀಸ್ ಒಳಗೆ ದರ್ಶನ ಅವರು ಹೊರಗೆ ಬರುತ್ತಾರೆ ಎನ್ನುವ ನಿರೀಕ್ಷೆ ಇದೆ. ಬರಲಿಲ್ಲ ಎಂದರೆ ನಾನೇ ಪರ್ಮಿಶನ್ ತೆಗೆದುಕೊಂಡು ಜೈಲಿಗೆ ಹೋಗಿ ದರ್ಶನ ಭೇಟಿ ಮಾಡುವೆ. ದರ್ಶನ್ ಆಶೀರ್ವಾದ ತೆಗೆದುಕೊಂಡು ಕಲ್ಟ್ ಸಿನಿಮಾ ರಿಲೀಸ್ ಮಾಡುತ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಡಿ.15ಕ್ಕೆ ’45’ ಟ್ರೈಲರ್ ಬ್ಲಾಸ್ಟ್..!



















