ದಾವಣಗೆರೆ : ಗುಂಡು ಹಾರಿಸಿಕೊಂಡು ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹನುಮಂತಪ್ಪ ಹೆಚ್.ವೈ ತುರಾಯ್ (70) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಡಿವೈಎಸ್ಪಿ.

ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಆಪ್ತರಿಂದ ತಿಳಿದು ಬಂದಿದೆ. ಮನೆಯಲ್ಲಿ ಒಬ್ಬರೇ ಕೂತಿದ್ದಾಗ ಬ್ಯಾರಲ್ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಕೋ ತಂಡ ಮನೆಯ ಹಾಗೂ ಮೃತದೇಹದ ಪರಿಶೀಲನೆ ನಡೆಸಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಿಂದ 2014ರಲ್ಲಿ ನಿವೃತರಾಗಿದ್ದ ಹನುಮಂತಪ್ಪ ಅವರು ದಾವಣಗೆರೆಗೆ ಬಂದು ನೆಲೆಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಸಿದ್ದು-ಡಿಕೆಶಿ ಬ್ರೇಕ್ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಡೆಲ್ಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ ಖರ್ಗೆ-ರಾಹುಲ್ ಗಾಂಧಿ!



















