ಧಾರವಾಡ: ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಇದೇ ತಿಂಗಳ ನವೆಂಬರ್ 5 ರಿಂದ 7ರವರೆಗೆ ಕನ್ನೇರಿ ಶ್ರೀಗಳ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಸ್ವಾಮೀಜಿ ಧಾರವಾಡ ಜಿಲ್ಲೆಗೆ ಆಗಮಿಸದಂತೆ ಜಿಲ್ಲಾಡಳಿತ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಕನ್ನೇರಿ ಸ್ವಾಮೀಜಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ನವೆಂಬರ್ 19ರಂದು ವಾದ ಪ್ರತಿವಾದ ಆಲಿಸಿದ್ದ ಧಾರವಾಡ ಹೈಕೋರ್ಟ್ ಪೀಠ, ತಡೆಯಾಜ್ಞೆ ತೆರವು ಮಾಡಿ ಇಂದು ಆದೇಶ ಮಾಡಿದೆ. ನವೆಂಬರ್ 4ರಂದೇ ಸ್ವಾಮೀಜಿ ಕಾರ್ಯಕ್ರಮಕ್ಕೆ ತಡೆ ನೀಡಿದ್ದ ಧಾರವಾಡ ಜಿಲ್ಲಾಡಳಿತದ ಆದೇಶವು ರಾಜಕೀಯ ಪ್ರೆರೀತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸದ್ಯ ಧಾರವಾಡ ಜಿಲ್ಲಾಡಳಿತಕ್ಕೆ ಈ ಆದೇಶದಿಂದ ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ಕಾರ್ಯಕ್ರಮದ ದಿನಾಂಕ ಮುಗಿದ ಮೇಲೆ ಕನ್ನೇರಿ ಶ್ರೀ ಹೈಕೋರ್ಟ್ ಮೇಟ್ಟಿಲೇರಿದ ಬಗ್ಗೆ ಸ್ಪಷ್ಟಿಕರಣ ನೀಡಿದ ಶ್ರೀಗಳ ಪರ ವಕೀಲರು, ಧಾರವಾಡ ಜಿಲ್ಲಾಧಿಕಾರಿ ಕಾರ್ಯಕ್ರಮಕ್ಕೆ ಬಾರದಂತೆ ಅಷ್ಟೇ ಆದೇಶ ಮಾಡದೇ ಜನವರಿ 4ರ ವರೆಗೆ ಶ್ರೀ ಜಿಲ್ಲೆಗೆ ಬರದಂತೆ ಆದೇಶ ಮಾಡಿದ್ದರು. ಇದನ್ನು ನಾವು ಇಲ್ಲಿ ಪ್ರಶ್ನೆ ಮಾಡಿದ್ದೆವು ಎಂದು ತಿಳಿಸಿದರು.
ನವೆಂಬರ್ 5, 6 ಮತ್ತು 7 ರಂದು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕನ್ನೇರಿ ಶ್ರೀಗಳು ಪಾಲ್ಗೊಳ್ಳಬೇಕಿತ್ತು. ಆದರೆ ಲಿಂಗಾಯತ ಸಮುದಾಯಕ್ಕೆ ಅವ್ಯಾಚ್ಯವ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಈ ಮನವಿ ಪರಿಶೀಲಿಸಿದ ಕನೇರಿ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೆ ಆಗಮಿಸಲು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ನೀಡಿದ್ದರು.
ಇದನ್ನೂ ಓದಿ : ಡೆಡ್ಲಿ ಮರ್ಡರ್ಗೆ ಬೆಚ್ಚಿದ ಕೋಲಾರ.. ವೃದ್ದನನ್ನು ಹತ್ಯೆಗೈದು ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಹಂತಕರು ಎಸ್ಕೇಪ್!



















