ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದಾರೆ.
ಮಂಡ್ಯ, ಬೀದರ್, ಮೈಸೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮಡಿಕೇರಿ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿಮಾಡಿ, ಪರಿಶೀಲನೆ ನಡೆಸುತ್ತಿರುವ ಲೋಕಾ ಅಧಿಕಾರಿಗಳು, ಮನೆಯಲ್ಲಿರುವ ದಾಖಲೆಗಳು, ಹಣ, ಚಿನ್ನಾಭರಣ, ಆಸ್ತಿ ಪಾಸ್ತಿ ಮೇಲೆ ಕಣ್ಣು ಹಾಕಿದ್ದಾರೆ.
ಲೋಕಾ ದಾಳಿಗೆ ಒಳಗಾದ ಅಧಿಕಾರಿಗಳ ಹೆಸರುಗಳು:
- ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ) – RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ
- ಮಂಡ್ಯ – ನಗರ ಪಾಲಿಕೆ CAO ಪುಟ್ಟಸ್ವಾಮಿ
- ಬೀದರ್ – ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
- ಮೈಸೂರು – ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ
- ಧಾರವಾಡ – ಕರ್ನಾಟಕ ವಿವಿಯ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ
- ಧಾರವಾಡ – ಪ್ರಾ.ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್
- ಶಿವಮೊಗ್ಗ – SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್
- ದಾವಣಗೆರೆ – APMC ಸಹ ನಿರ್ದೇಶಕ ಪ್ರಭು ಜೆ.
- ಮೈಸೂರು – ಮಡಿಕೇರಿ PWD, ಸ.ಅ. ಇಂಜಿನಿಯರ್ ಗಿರೀಶ್ ಡಿ.ಎಂ
- ಹಾವೇರಿ – ಶೇಕಪ್ಪ, ಇಇ, ಯೋಜನಾ ನಿರ್ದೇಶಕ ಕಚೇರಿ ಹಾವೇರಿ
ಇದನ್ನೂ ಓದಿ: ಬೆಂಗಳೂರು | ಚಾಲಕನ ನಿಯಂತ್ರಣ ತಪ್ಪಿ ಲಾರಿ ಸಮೇತ ಚಾಲಕ ಜಲಸಮಾಧಿ?



















