ಕಾರವಾರ: ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ 5 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ನಡೆದಿದೆ.
ಭಟ್ಕಳದ ಮೌಲವಿ ಶಾಹಿದುಲ್ಲಾಹ ಎಂಬವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೇಖ್ ಮೃತ ಬಾಲಕ. ಕುಟುಂಬದವರ ಜೊತೆ ಆಟವಾಡುತ್ತಿದ್ದಾಗ ಬಾಲಕ ಕಾಲುಜಾರಿ ಈಜುಕೊಳಕ್ಕೆ ಬಿದ್ದಿರುವ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಶಾಹಿದುಲ್ಲಾಹ ಹೋಮ್ ಸ್ಟೇ ಮನೆಯನ್ನು ಲೀಸ್‍ಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಗೆ ಪತ್ನಿಯಿಂದಲೇ ಸುಪಾರಿ | 7ವರ್ಷದ ಬಳಿಕ ಬಯಲಾಯ್ತು ಕೊಲೆ ರಹಸ್ಯ



















