ಬೆಂಗಳೂರು : ಡಿಕೆಶಿ ಬಣದ ಶಾಸಕರು ದೆಹಲಿ ಪ್ರವಾಸ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ ಇರುವುದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಡಿಕೆಶಿ ದೆಹಲಿ ಭೇಟಿ ವಿಚಾರ ಅವರನ್ನೇ ಕೇಳ್ಬೇಕು, ನನಗೆ ಗೊತ್ತಿಲ್ಲ ʻಸಿದ್ದರಾಮಯ್ಯ ಕೊಟ್ಟ ಮಾತನ್ನ ಉಳಿಸಿಕೊಳ್ತಾರೆʼ ಎಂದಿದ್ದಾರೆ.
ಬಿಜೆಪಿಯಲ್ಲಿ ಇದ್ದಷ್ಟು ಬಣಗಳು ನಮ್ಮಲ್ಲಿ ಇಲ್ಲ.. ವಿಜಯೇಂದ್ರ ನಾಯಕತ್ವವನ್ನ ಯಾರು ಒಪ್ಪುತ್ತಿಲ್ಲ. ನಮ್ಮಲ್ಲಿ ಎರಡನೇ ಇನ್ನಿಂಗ್ಸ್ ಅಂತಾ ಏನೂ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಹೊಸ ಮನೆಗೆ ಸಿಗ್ತಿಲ್ಲ ಪವರ್ ಕನೆಕ್ಷನ್.. ಕಾರಣವೇನು?



















