ಬೆಂಗಳೂರು : ಸಂಪುಟ ಪುನಾರಚನೆಯೋ? ನಾಯಕತ್ವ ಬದಲಾವಣೆಯೋ? ಗಿಣಿ ಶಾಸ್ತ್ರ ಹೇಳುವವರನ್ನ ನೀವೇ ಕೇಳಿ ಎಂದು ಡಿಕೆಶಿ ಹೇಳಿದ್ದಾರೆ.
ಮಾದ್ಯಮಗಾರರೊಂದಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಮಂತ್ರಿ ಸ್ಥಾನ ಕೇಳೋದು ಎಂಎಲ್‌ಎ, ಎಂಎಲ್‌ಸಿಗಳ ಹಕ್ಕು. ಆದರೆ ಮೇಕೆದಾಟ ವಿಚಾರವಾಗಿ ನಾನು ದೆಹಲಿಗೆ ತೆರಳಿದ್ದೆ, ನಾಯಕತ್ವ ಬದಲಾವಣೆ ಬಗ್ಗೆ ಶಾಸ್ತ್ರ ಕೇಳಿ ಹೇಳ್ತೇನೆ, ಗಿಣಿ ಶಾಸ್ತ್ರ ಹೇಳುವರು ಮಾತ್ರ ಇದಕ್ಕೆ ಉತ್ತರಿಸಲು ಸಾಧ್ಯ ಎಂದಿದ್ದಾರೆ.
ರಾಜಕೀಯ ವಿಚಾರವಾಗಿ ಖರ್ಗೆ ಜೊತೆ ನಾನು ಮಾತರನಾಡಿಲ್ಲ. ದೆಹಲಿಗೆ ಹೋದಾಗ ವರಿಷ್ಢರನ್ನ ಭೇಟಿಯಾಗೋದು ಸಹಜ. ಎಲ್ಲಾ ಶಾಸಕರಿಗೂ ಮಂತ್ರಿ ಆಗುವ ಆಸೆ ಇರುತ್ತೆ ಎಂದು ಕೆಲ ಶಾಸಕರಿಂದ ಸಚಿವ ಸ್ಥಾನಕ್ಕೆ ಲಾಬಿ ವಿಚಾರ ಸಂಬಂಧ ಪಟ್ಟಂತೆ ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿಯ ಕೆಳ ನ್ಯಾಯಾಲಯ, CRPF ಶಾಲೆಗಳಿಗೆ ಬಾಂಬ್ ಬೆದರಿಕೆ!



















