ನರಹುಲಿ ಎಂದರೆ ಮಾಂಸದ ಬಣ್ಣ, ಕಂದು, ಗುಲಾಬಿ ಅಥವಾ ಬಿಳಿ ಬಣ್ಣದ ಸಣ್ಣ ಬೆಳವಣಿಗೆಯಾಗಿದ್ದು, ಚರ್ಮದ ಮೇಲೆ ಹರಳಿನ ಉಬ್ಬುಗಳಂತೆ ಭಾಸವಾಗುತ್ತದೆ. ಇದು ಹ್ಯೂಮನ್ ಪ್ಯಾಪಿಲೋಮ ವೈರಸ್ ನಿಂದ ಉಂಟಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದ ಮೂಲಕ ಅಥವಾ ವೈರಸ್ ಪೀಡಿತ ವ್ಯಕ್ತಿಯು ಬಳಸಿದ ವಸ್ತುವಿನ ಸಂಪರ್ಕದ ಮೂಲಕ ಹರಡಬಹುದು. ನರಹುಲಿಗಳು ವ್ಯಕ್ತಿಯ ದೇಹದಾದ್ಯಂತ ಹರಡಬಹುದು.

ಕೆಲವೊಮ್ಮೆ ಸೋಂಕಿನಿಂದಾಗಿ ಚರ್ಮದ ಮೇಲೆ ನೋವು ರಹಿತ ಗುಳ್ಳೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ, ಕೊನೆಗೆ ಅದು ಅಲ್ಲಿಗೆಯೇ ಗಂಟುಗಳ ರೂಪ ಪಡೆಯುತ್ತವೆ. ಕನ್ನಡದಲ್ಲಿ ಇದನ್ನು ನರಹುಲಿ ಅಥವಾ ವಾರ್ಟ್ಸ್ ಎಂದೂ ಕರೆಯಲಾಗುತ್ತದೆ.
ಹಾಗಾದ್ರೆ ನರಹುಲಿಗಳು ಹೇಗೆ ಸಂಭವಿಸುತ್ತವೆ?
ನಮ್ಮಲ್ಲಿ ಹೆಚ್ಚಿನವರಿಗೆ ಚರ್ಮದ ಮೇಲೆ ಇದ್ದಕ್ಕಿದ್ದಂತೆ, ದದ್ದು ಚರ್ಮ ಕೆಂಪಗೆ ಆಗುವುದು, ಗುಳ್ಳೆಗಳು ಮೂಡುವುದು ಇಂತಹ ತ್ವಚೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೆಲವೊಂದು ಗುಳ್ಳೆಗಳು ಇದ್ದಕ್ಕಿದಂತೆ ಗಂಟುಗಳ ರೂಪಕ್ಕೆ ತಿರುಗುತ್ತದೆ. HPV ವೈರಸ್ ನಿಮ್ಮ ಚರ್ಮದ ಸಂಪರ್ಕಕ್ಕೆ ಬಂದು ಸೋಂಕನ್ನು ಉಂಟುಮಾಡಿದಾಗ ನರಹುಲಿಗಳು ಉಂಟಾಗುತ್ತವೆ. ಕಡಿತಗಳ ಮೂಲಕ ವೈರಸ್ ಚರ್ಮದ ಮೇಲಿನ ಪದರವನ್ನು ಪ್ರವೇಶಿಸಿದ ನಂತರ ಸೋಂಕು ಪ್ರಾರಂಭವಾಗುತ್ತದೆ.

- ಸಾಮಾನ್ಯ ನರಹುಲಿಗಳು : ಇವು ಹೆಚ್ಚಾಗಿ ಕೈಗಳ ಮೇಲೆ ಕಂಡುಬರುತ್ತವೆ ಮತ್ತು ಒರಟುಗಿದ್ದು, ಬೂದು-ಕಂದು ಬಣ್ಣದಲ್ಲಿರುತ್ತವೆ.
- ಪ್ಲಾಂಟರ್ ನರಹುಲಿಗಳು : ಇವು ಪಾದಗಳ ಅಡಿಭಾಗದಲ್ಲಿ ಬೆಳೆಯುತ್ತವೆ ಮತ್ತು ಗಾಢವಾದ ಚುಕ್ಕೆಗಳಿಂದ ಗಟ್ಟಿಯಾಗಿ ಮತ್ತು ದಪ್ಪವಾಗಿರುತ್ತವೆ. ನೀವು ನಡೆಯುವಾಗ ಅವು ನೋವಿನಿಂದ ಕೂಡಿರುತ್ತವೆ.
- ಚಪ್ಪಟೆ ನರಹುಲಿಗಳು : ಮುಖ, ತೋಳುಗಳು ಮತ್ತು ಕಾಲುಗಳ ಮೇಲೆ ಬೆಳೆಯಬಹುದು. ಅವು ಚಿಕ್ಕದಾಗಿರುತ್ತವೆ, ಚಪ್ಪಟೆಯಾದ ಮೇಲ್ಭಾಗವನ್ನು ಹೊಂದಿರುತ್ತವೆ ಮತ್ತು ತಿಳಿ ಹಳದಿ, ಕಂದು ಅಥವಾ ಗುಲಾಬಿ ಬಣ್ಣದ್ದಾಗಿರಬಹುದು.
- ಫಿಲಿಫಾರ್ಮ್ ನರಹುಲಿಗಳು : ಇವು ಮುಖದ ಮೇಲೆ, ಸಾಮಾನ್ಯವಾಗಿ ಬಾಯಿ, ಮೂಗು ಅಥವಾ ಗಲ್ಲದ ಸುತ್ತಲೂ ಬೆಳೆಯಬಹುದು. ಅವು ಚರ್ಮದಂತೆಯೇ ಇರುತ್ತವೆ, ಆದರೆ ಅವುಗಳಿಂದ ದಾರದಂತಹ ಬೆಳವಣಿಗೆಗಳು ಹೊರಬರುತ್ತವೆ.
- ಪೆರಿಯುಂಗುವಲ್ ನರಹುಲಿಗಳು : ಇದು ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಕೆಳಗೆ ಮತ್ತು ಸುತ್ತಲೂ ಸಂಭವಿಸುತ್ತದೆ.
ನರಹುಲಿಗಳು ಸಾಮಾನ್ಯವಾಗಿ ತಾವಾಗಿಯೇ ಮಾಯವಾಗುತ್ತವೆ, ಆದರೆ ಕೆಲವೊಮ್ಮೆ ದೀರ್ಘಾಕಾಲ ಉಳಿಯುತ್ತದೆ. ಆ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.

ಇದರ ಪರಿಹಾರವೇನು?
- ಸಾಮಾನ್ಯವಾಗಿ ನರಹುಲಿ ಅಥವಾ ವಾರ್ಟ್ಸ್ ಸಮಸ್ಯೆಯನ್ನು ತೆಗೆದು ಹಾಕಲು ನಮ್ಮಲ್ಲಿ ಬಹುತೇಕರು ಬಹಳ ಹಣ ಖರ್ಚು ಮಾಡುವು ದುಂಟು! ಆದರೆ ನರಹುಲಿ ಅಥವಾ ವಾರ್ಟ್ಸ ಸಮಸ್ಯೆ ನೈಸರ್ಗಿಕವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಆಗಿರುವ ಕಾರಣಗಳಿಂದಾಗಿ ನಿಸರ್ಗದತ್ತವಾಗಿ ಇದನ್ನು ಸುಲಭವಾಗಿ ಪರಿಹಾರ ಮಾಡಬಹುದು.
- ಇಂದಿನ ವೈದ್ಯಕೀಯ ಲೋಕದಲ್ಲಿ ಈ ತ್ವಚೆಗೆ ಸಂಬಂಧಪಟ್ಟ ಸಮಸ್ಯೆ ಗಳಿಗೆ ಹಲವಾರು ಬಗೆಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇವು ದುಬಾರಿ ಯಲ್ಲದೆ ನೋವಿನಿಂದ ಕೂಡ ಕೂಡಿರುತ್ತವೆ.

ಆಪಲ್ ಸೈಡರ್ ವಿನೆಗರ್
- ಆಪಲ್ ಸೈಡರ್ ವಿನೆಗರ್ ಒಂದು ನೈಸರ್ಗಿಕ ಆಮ್ಲವಾಗಿದ್ದು, ಇದು ಮಚ್ಚೆಗಳು ಮತ್ತು ನರಹುಲಿಗಳ ಹೊರ ಪದರವನ್ನು ಕ್ರಮೇಣ ದುರ್ಬಲ ಗೊಳಿಸುತ್ತದೆ. ಇದನ್ನು ಬಳಸಲು, ಹತ್ತಿ ಉಂಡೆಯನ್ನು ಆಪಲ್ ಸೈಡರ್ ವಿನೆಗರ್‌ನಲ್ಲಿ ನೆನೆಸಿ.
- ಅದನ್ನು ನೇರವಾಗಿ ಮಚ್ಚೆ ಅಥವಾ ಚರ್ಮದ ಗಂಟುಗಳ ಮೇಲೆ ಇರಿಸಿ ಮತ್ತು ಬ್ಯಾಂಡೇಜ್‌ನಿಂದ ಮುಚ್ಚಿ.ಇದನ್ನು ಪ್ರತಿದಿನ 1-2 ಗಂಟೆಗಳ ಕಾಲ ಅನ್ವಯಿಸಿ. ಕೆಲವು ದಿನಗಳಲ್ಲಿ, ಮಚ್ಚೆ ಅಥವಾ ಗಂಟು ನಿಧಾನಕ್ಕೆ ಕಡಿಮೆ ಆಗುತ್ತಾ ಬರುತ್ತದೆ.
ಬಾಳೆಹಣ್ಣಿನ ಸಿಪ್ಪೆ

- ಬಾಳೆಹಣ್ಣಿನ ಸಿಪ್ಪೆ ಚರ್ಮದ ಕೋಶಗಳನ್ನು ಒಡೆಯಲು ಸಹಾಯ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಮಚ್ಚೆಗಳು ಮತ್ತು ನರಹುಲಿ ಗಳನ್ನು ತೆಗೆದು ಹಾಕಲು, ಸಿಪ್ಪೆಯ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಸಿಪ್ಪೆಯ ಒಳಭಾಗವನ್ನು ನರಹುಲಿ ಮೇಲೆ ಇರಿಸಿ.
- ಅದರ ಮೇಲೆ ಟೇಪ್ ಹಚ್ಚಿ ರಾತ್ರಿಯಿಡೀ ಬಿಡಿ.ಪ್ರತಿದಿನ ಈ ಪರಿಹಾರವನ್ನು ಅನುಸರಿಸಿ, ಇದರಿಂದ ಕ್ರಮೇಣವಾಗಿ ಈ ನರಹುಲಿ ಗುಳ್ಳೆಗಳು ಕಡಿಮೆ ಆಗುತ್ತಾ ಬರುತ್ತವೆ.
ಫ್ಲಾಕ್ಸ್ ಸೀಡ್ಸ್ ಅಥವಾ ಅಗಸೆಬೀಜಗಳು

- ಫ್ಲಾಕ್ಸ್ ಸೀಡ್ಸ್ ಅಥವಾ ಅಗಸೆಬೀಜಗಳ ಆರೋಗ್ಯದ ಜೊತೆಗೆ ತ್ವಚೆಗೆ ಸಂಬಂಧ ಪಟ್ಟ ಸಮಸ್ಯೆಗಳಿಗೂ ಕೂಡ ಬಹಳ ಒಳ್ಳೆಯದು.
- ಈ ಬೀಜಗಳಲ್ಲಿ ವಿಟಮಿನ್ ಸಿ ಪ್ರಮಾಣವು ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಕೂಡ ನೆರವಿಗೆ ಬರುತ್ತದೆ.
- ಮೊದಲಿಗೆ ಎರಡು ಟೇಬಲ್ ಚಮಚದಷ್ಟು ಅಗಸೆ ಬೀಜಗಳನ್ನು ಪುಡಿ ಮಾಡಿಕೊಂಡು, ಒಂದು ಒಂದು ಬೌಲ್ ನಲ್ಲಿ ಹಾಕಿಕೊಳ್ಳಿ.
- ಆ ಬಳಿಕ ಪುಡಿಗೆ ಎರಡು ಟೀ ಚಮಚದಷ್ಟು ಅಗಸೆಬೀಜದ ಎಣ್ಣೆ ಮತ್ತು ಇಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಂಡು,ತ್ವಚೆಯ ನರಹುಲಿ ಅಥವಾ ಮಚ್ಚೆಗಳಿಗೆ ದಿನಾ ಹಚ್ಚುತ್ತಾ ಬರುವುದರಿಂದ, ತ್ವಚೆಗೆ ಸಂಬಂಧ ಪಟ್ಟ ಈ ಸಮಸ್ಯೆ ಬಹಳ ಬೇಗನೇ ನಿವಾರಣೆ ಆಗುತ್ತದೆ.
ಹರಳೆಣ್ಣೆ ಮತ್ತು ಅಡುಗೆ ಸೋಡಾ

- ಹರಳೆಣ್ಣೆ ಮತ್ತು ಅಡುಗೆ ಸೋಡಾ ಮಿಶ್ರಣವು ಚರ್ಮವನ್ನು ಮೃದುಗೊಳಿ ಸುತ್ತದೆ ಮತ್ತು ಮಚ್ಚೆಗಳನ್ನುಕ್ರಮೇಣ ಕಡಿಮೆ ಮಾಡುತ್ತದೆ. ಇದನ್ನು ಬಳಸಲು, ಒಂದು ಟೀ ಚಮಚದಷ್ಟು ಹರಳೆಣ್ಣೆಗೆ ಚಿಟಿಕೆಯಷ್ಟು ಅಡುಗೆ ಸೋಡಾವನ್ನು ಸೇರಿಸಿ,
- ದಪ್ಪ ಪೇಸ್ಟ್ ಮಾಡಿ ಅದನ್ನು ಮಚ್ಚೆ ಅಥವಾ ನರಹುಲಿಗಳಿಗೆ ಹಚ್ಚಿ, ನಂತರ ರಾತ್ರಿಯಿಡೀ ಬಿಡಿ. ದಿನಾ ಹೀಗೆ ಮಾಡುವುದರಿಂದ ತ್ವಚೆಗೆ ಸಂಬಂಧಪಟ್ಟ ಈ ಸಮಸ್ಯೆಗಳು ಬಹ ಬೇಗನೇ ಗುಣ ಮುಖವಾಗುತ್ತವೆ ನೋಡಿ
ಬೆಳ್ಳುಳ್ಳಿ

ಒಂದೆರಡು ಮಧ್ಯಮ ಗಾತ್ರದ ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ. ನಂತರ ಈ ಬೆಳ್ಳುಳ್ಳಿ ಪೇಸ್ಟ್ ಅನ್ನು ನರಹುಲಿ ಅಥವಾ ಮಚ್ಚೆ ಇರುವ ಕಡೆಗೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡುತ್ತಾ ಬರುವುದರಿಂದ, ಕೆಲವೇ ದಿನಗಳಲ್ಲಿ ನರಹುಲಿಗಳು ನಿಧಾನಕ್ಕೆ ನಿವಾರಣೆಯಾಗುತ್ತಾ ಬರುತ್ತದೆ.
ಐಸ್ ಪ್ಯಾಕ್

ನರಹುಲಿಯಿಂದ ಕಿರಿಕಿರಿ, ನೋವು ಅಥವಾ ಊತ ಉಂಟಾಗುತ್ತಿದ್ದರೆ, ಐಸ್ ಪರಿಹಾರ ನೀಡುತ್ತದೆ. ಇದನ್ನು ಬಳಸಲು, ಐಸ್ ಕ್ಯೂಬ್‌ಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ 5-10 ನಿಮಿಷಗಳ ಕಾಲ ನರಹುಲಿಯ ಮೇಲೆ ಇರಿಸಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ; ಇದು ನರಹುಲಿಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ, ಆದರೆ ಇದು ಊತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಇವೆಲ್ಲ ಪ್ರಾಥಮಿಕ ಪರಿಹಾರಕ್ಕೆ ದಾರಿಯಾಗಿವೆ. ಇದೆಲ್ಲ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಇದನ್ನೂ ಓದಿ : ಐಪಿಎಲ್ 2026 : ಹರಾಜಿಗೂ ಮುನ್ನವೇ ಬಿಗ್ ಟ್ವಿಸ್ಟ್! ಆಟಗಾರರ ರಿಟೆನ್ಷನ್, ರಿಲೀಸ್ ಸಂಪೂರ್ಣ ಪಟ್ಟಿ



















