ನವದೆಹಲಿ : ಬಾಲಿವುಡ್‌ನ ಖ್ಯಾತ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ ವಿಭಿನ್ನ ಅಭಿನಯದ ಮೂಲಕವೇ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ. ಕ್ವೀನ್, ಅಲಿಗಢ, ನ್ಯೂಟನ್, ಬರೇಲಿ ಕಿ ಬರ್ಫಿ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಇವರಿಗೆ ಉತ್ತಮ ಸಿನಿಮಾ ಆಫರ್ ಕೂಡ ಸಿಗುತ್ತಿದೆ.
ರಾಜ್‌ಕುಮಾರ್ ರಾವ್ ಅವರು ಪತ್ರಲೇಖಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ನವೆಂಬರ್ 15ಕ್ಕೆ ಈ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ ಅಭಿಮಾನಿಗಳಿಗೆ ಈ ದಂಪತಿ ಹೊಸ ವಿಚಾರ ರಿವಿಲ್ ಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು, ವಿವಾಹ ವಾರ್ಷಿಕೋತ್ಸವದ ಶುಭ ದಿನದಂದೆ ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ರಾಜ್‌ಕುಮಾರ್ ರಾವ್ ಹಂಚಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ದಂಪತಿಗಳಿಗೆ ಡಬಲ್ ಸಲಬ್ರೇಶನ್‌ಗೆ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ನವೆಂಬರ್ 15ರ ಬೆಳಗ್ಗೆ ಇಬ್ಬರು ತಮ್ಮ ಮೊದಲ ಮಗುವಿನ ಜನನದ ಬಗ್ಗೆ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಪಿಂಕ್ ಕಲರ್ ಥೀಮ್‌ನ ಚಿತ್ರವೊಂದ ರಲ್ಲಿ ಮಗುವಿನ ಬಟ್ಟೆಗಳೊಂದಿಗೆ ಒಂದು ವಿಶೇಷ ಬರಹವನ್ನು ಅವರು ಹಂಚಿಕೊಂಡಿದ್ದಾರೆ. ದೇವರು ನಮಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ನಮ್ಮ 4ನೇ ವಿವಾಹ ವಾರ್ಷಿ ಕೋತ್ಸವದಂದು ದೇವರು ನಮಗೆ ನೀಡಿದ ಅತ್ಯಂತ ದೊಡ್ಡ ಆಶೀರ್ವಾದ ಎಂಬ ಸಾಲುಗಳನ್ನು ಅದರ ಮೇಲೆ ಬರೆಯಲಾಗಿದ್ದನ್ನು ಪೋಸ್ಟ್‌ನಲ್ಲಿ ಕಾಣಬಹುದು.
ಇದನ್ನೂ ಓದಿ : ಚಿಕ್ಕಮಗಳೂರು | ಸೆಲ್ಫಿ ಕ್ಲಿಕ್ಕಿಸುವಾಗ ದುರಂತ.. ಕಾಲು ಜಾರಿ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!



















