ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಅಮಿತ್ ಶಾ ಭವಿಷ್ಯದಂತೆ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಚುನಾಣಾ ಫಲಿತಾಂಶದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರ್ಷ ವ್ಯಕ್ತಪಡಿಸಿದ್ದು, ಇದು ʻವಿಕಸಿತ್ ಬಿಹಾರʼದ ಮೇಲೆ ನಂಬಿಕೆಯಿಟ್ಟ ಬಿಹಾರಿಗಳ ಗೆಲುವು ಎಂದು ಬಣ್ಣಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ʻಅಭಿವೃದ್ಧಿ ಹೊಂದಿದ ಬಿಹಾರʼದಲ್ಲಿ ನಂಬಿಕಯಿಡುವ ಪ್ರತಿಯೊಬ್ಬ ಬಿಹಾರಿಯ ಗೆಲುವು ಇದು. ʻಜಂಗಲ್ ರಾಜ್ʼ ಮತ್ತು ತುಷ್ಟೀಕರಣ ರಾಜಕೀಯ ಮಾಡುವವರು ಯಾವುದೇ ವೇಷ ಧರಿಸಿ ಬಂದರೂ, ಅವರಿಗೆ ಲೂಟಿ ಮಾಡೋದಕ್ಕೆ ಅವಕಾಶ ಸಿಗಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಜನರು ಈಗ ಅಭಿವೃದ್ಧಿಯ ಆಧಾರದ ಮೇಲೆ ಮತದಾರರು ತಮ್ಮ ಜನಾದೇಶ ನೀಡುತ್ತಾರೆ ಎಂದು ವಿಪಕ್ಷಗಳಿಗೆ ಕುಟುಕಿದ್ದಾರೆ.
ಬಿಹಾರದ ಗೆಲುವಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಜಿ, ನಿತೀಶ್ ಕುಮಾರ್ ಜಿ ಹಾಗೂ ಎಲ್ಲಾ ಎನ್‌ಡಿಎ ನಾಯಕರು ಮತ್ತು ಕಾರ್ಯಕರ್ತರಿಗೆ ಹಾಗೂ ದಣಿವರಿಯದೇ ತಮ್ಮ ಕಠಿಣ ಪರಿಶ್ರಮದ ಮೂಲಕ ಫಲಿತಾಂಶ ನಿಜವಾಗಿಸಿದ ಬಿಹಾರದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂದುವರಿದು… ಮೋದಿ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರದ ಮೇಲೆ ನೀವು ಇಟ್ಟಿರುವ ಭರವಸೆ ಮತ್ತು ನಂಬಿಕೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಜನಾದೇಶವನ್ನ ಪೂರೈಲು ಶ್ರಮಿಸುತ್ತದೆ ಎಂದು ಬಿಹಾರದ ಜನತೆ ಹಾಗೂ ಎಲ್ಲಾ ತಾಯಂದಿರು, ಸಹೋದರಿಯರಿಗೆ ಭರವಸೆ ನೀಡುತ್ತೇನೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಾಲುಮರದ ತಿಮ್ಮಕ್ಕನಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾವುಕ ನಮನ | ಸುದೀರ್ಘ ಪೋಸ್ಟ್ ಮೂಲಕ ಹೇಳಿದ್ದೇನು?




















ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಸುದೀಪ್ ಫ್ಯಾನ್ಸ್?