ಗದಗ : ಮೆಕ್ಕೆಜೋಳ ರಾಶಿ ತುಂಬುವಾಗ ಮೋಸ ಮಾಡುತ್ತಿದ್ದ ದಲ್ಲಾಳಿಗಳಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಈ ಘಟನೆ ಗದಗ ತಾಲೂಕಿನ ಕುರ್ತಕೋಟಿಯಲ್ಲಿ ನಡೆದಿದೆ.
25 ಚೀಲದ ಕಟ್ಟು ಅಂತ 35 ಚೀಲದ ಕಟ್ಟಿ ಕೊಟ್ಟು ಗೋಲ್ಮಾಲ್ ಮಾಡಿದ್ದಾರೆ. ಸುಮಾರು ಐದು ಲಾರಿ ತುಂಬಿಕೊಂಡು ಹೋಗಿದ್ದಾರೆ. ತುಂಬಿದ ಚೀಲ ಲೆಕ್ಕ ಸಿಗದಂತೆ ಪಟ ಪಟ ಅಂತ ಹೇರಿಕೊಂಡು ಹೋಗುತ್ತಿದ್ದರು. ಬಳಿಕ ಒಬ್ಬ ರೈತ ಇದನ್ನೂ ಆಗ್ರಹಿಸಿ ಚೀಲದ ಕಟ್ಟನ್ನ ಎಣಿಸಿ ತುಂಬುವಾಗ ಘಟನೆ ಬೆಳಕಿಗೆ ಬಂದಿದೆ.
ದಲ್ಲಾಳಿಗಳು ಮೋಸದಿಂದ ಆಕ್ರೋಶಗೊಂಡ ರೈತರು ಹಿಗ್ಗಾಮುಗ್ಗಾ ಗೂಸ ನೀಡಿ ಬಾಯಿಬಿಡಿಸಿದ್ದಾರೆ. ಬಾಯ್ಬಿಟ್ಟ ದಲ್ಲಾಳಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣ ಗದಗ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಚಿನ್ನ ಖರೀದಿದಾರರೇ ಎಚ್ಚರ : ಸೆಬಿ ಕೊಟ್ಟಿರೋ ಈ ವಾರ್ನಿಂಗ್ ನಿಮಗೆ ತಿಳಿದಿರಲಿ



















