ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಬುಲೆರೋ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಬೆಂಗಳೂರು-ಆನೇಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 4:30ಕ್ಕೆ ಈ ಅವಘಡ ನಡೆದಿದೆ. ಡಿವೈಡರ್ಗೆ ಗುದ್ದಿದ ರಭಸಕ್ಕೆ ಬುಲೆರೋ ವಾಹನ ಸಂಪೂರ್ಣ ಜಖಂಗೊಂಡಿದೆ.
ಅದೃಷ್ಟಾವಶಾತ್ ಅಪಘಾತದಲ್ಲಿ ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾನೆ. ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಇದನ್ನು ಓದಿ : ಪಾಕ್ ಜನರಲ್‌ಗೆ ವಿವಾದಿತ ನಕ್ಷೆ ನೀಡಿದ ಬಾಂಗ್ಲಾದ ಯೂನುಸ್: ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದ ಭಾಗವೆಂದು ಬಿಂಬಿಸಿದ ನಕ್ಷೆ



















