ಮಂಗಳೂರು : ರವಿವಾರ ರಾತ್ರಿ ಏಕಾಏಕಿ ಸಿಡಿಲು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಎರಡು ಮನೆಗಳಿಗೆ ಸಿಡಿಲು ಬಡಿದು ಆರು ಮಂದಿ ಗಾಯಗೊಂಡಿರುವ ಘಟನೆ ಕಾಟಿಪಳ್ಳ 9ನೇ ಬ್ಲಾಕ್ ಮಧ್ಯದ ಗುರುನಗರ ಎಂಬಲ್ಲಿ ರಾತ್ರಿ ನಡೆದಿದೆ.
ಭಾರತಿ(30), ವಿನಯ(35), ಕುಸುಮ(55), ಹರಿಯಪ್ಪ(67), ರವಿಕಲಾ (60), ನಿತೀಶ್ (35) ಎಂಬವರು ಗಾಯಗೊಂಡಿದ್ದು, ಅವರನ್ನು ಕಾನದ ಮಿಸ್ಕಿತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಮನೆಯಲ್ಲಿದ್ದ ಎಲ್ಲಾ ಸ್ವಿಚ್ ಬೋರ್ಡ್‌ಗಳು ಸುಟ್ಟು ಕರಕಲಾಗಿವೆ. ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.



















