ಉಡುಪಿ : ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಪಶ್ಚಿಮ ಜಾಗರ ಪೂಜೆ ಪ್ರಾರಂಭಗೊಂಡಿದ್ದು, ಇನ್ನೂ ಒಂದು ತಿಂಗಳುಗಳ ಕಾಲ ಪೂಜೆ ನಡೆಯಲಿದೆ. ಇದೊಂದು ವಾರ್ಷಿಕ ವಿಶೇಷ ಪೂಜೆ, ಈ ಪೂಜೆ ಮುಗಿದ ಮರುದಿನದಿಂದ ಮಠದಲ್ಲಿ ಉತ್ಸವಾದಿಗಳು ಪ್ರಾರಂಭವಾಗುತ್ತದೆ.

ಜಾಗರ ಎಂದರೆ ನಿದ್ರೆ, ಪಶ್ಚಿಮ ಜಾಗರ ಎಂದರೆ ರಾತ್ರಿಯ ಕೊನೆಯ ಭಾಗ ಅಂದರೆ, ಪ್ರಾತಃಕಾಲ. ಪಕ್ಷಿಗಳು ಎಚ್ಚರಗೊಂಡು ಚಿಲಿಪಿಲಿಗುಟ್ಟುವ ಸಮಯವಾಗಿದ್ದರಿಂದ ಪಕ್ಷಿ ಜಾಗರ ಎಂತಲೂ ಕರೆಯುತ್ತಾರೆ.
ಆಷಾಢ ಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿ ಇದ್ದಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಇನ್ನೂ ಒಂದು ತಿಂಗಳು, ಪ್ರಾತಃಕಾಲದ ಸಮಯದಲ್ಲಿ ಅಪೂರ್ವ ವಾದ್ಯ ಘೋಷದ ಬಳಿಕ ಪರ್ಯಾಯ ಶ್ರೀ ಪಾದರಿಂದ ಪಶ್ಚಿಮ ಜಾಗರ ಪೂಜೆ ನಡೆಯುತ್ತದೆ.

ಈ ಪೂಜಾ ಆಚರಣೆಯನ್ನು ವರಾಹಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ಇದು ಯೋಗ ನಿದ್ರೆಯಿಂದ ಭಗವಂತ ನನ್ನ ಎಚ್ಚರಿಸಲು ಭಕ್ತರು ಮಾಡುವ ಸೇವೆಯಾಗಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇದು ವಿಶೇಷವಾಗಿದೆ.



















