ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಹೀರೊ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಗುಲ್ಲು ಹೈದ್ರಾಬಾದ್ ಸಿನಿಮಾಸರ್ಕಲ್ ನಿಂದ ಬಂದಿದೆ. ಇಬ್ಬರೂ ಇಷ್ಟು ದಿನ ಎಲ್ಲಾ ವದಂತಿಗಳಿಗೆ ಮೌನವೇ ಉತ್ತರ ಎಂದು ಸುಮ್ಮನಾಗಿಬಿಟ್ಟಿದ್ದರು. ಗಾಸಿಪ್ ನಿಜವಾಯಿತಾ? ರಹಸ್ಯ ಎಂಗೇಜ್ ಮೆಂಟ್ ನಡೆದಿದ್ದು ಯಾಕೆ ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದುಕೊಂಡು ಬಿಟ್ಟಿದೆ..!

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಓಡೋ ಕುದುರೆ..! ‘ಅನಿಮಲ್’ ರಿಲೀಸ್ ಬಳಿಕ ಯಾರು ರಶ್ಮಿಕಾ ಸಕ್ಸಸ್ ಬಗ್ಗೆ ಕೆಮ್ಮಾಂಗಿಲ್ಲ ಎಂಬ ಸ್ಟಾರ್ ಡಮ್ ಕ್ರಿಯೇಟ್ ಆಯಿತು. ಈಗ ರಶ್ಮಿಕಾ ಯಾರಿಗೂ ಹೇಳದಂತೆ ತಮ್ಮ ಫ್ಯಾನ್ಸ್ ಹಾರ್ಟ್ ಬ್ರೇಕ್ ಮಾಡಿದರಾ ಎಂಬ ವದಂತಿ ಜೋರಾಗೆ ಹಬ್ಬಿದೆ. ತಮ್ಮ ಬಹುದಿನಗಳ ಗೆಳೆಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸೀಕ್ರೆಟ್ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಸುದ್ದಿ ಪಾದರಸದಂತೆ ಹರಿದಾಡುತ್ತಿದೆ.

ವಿಜಯ್ ದೇವರಕೊಂಡ ಟಾಲಿವುಡ್ ಯೂತ್ ಐಕಾನ್. ವಿಜಯ್-ರಶ್ಮಿಕಾ ಒಟ್ಟಿಗೆ ನಟಿಸಿದ ಗೀತಾಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸೂಪರ್ ಹಿಟ್ ಚಿತ್ರಗಳಾಗಿ ಹೊರಹೊಮ್ಮಿದೆ. ‘ಗೀತಾ ಗೋವಿಂದಂ’ ಶೂಟಿಂಗ್ ಸಮಯದಲ್ಲಿ ಇಬ್ಬರ ಸ್ನೇಹ ಪ್ರೀತಿಯ ಅಡ್ರೆಸ್ ಹುಡುಕಿಬಿಟ್ಟಿತ್ತಂತೆ. ಅನೇಕ ಬಾರಿ ಇಬ್ಬರು ಟ್ರಿಪ್ ಗೆ ಹೋದ ಫೋಟೋಸ್ ವೈರಲ್ ಆಗಿವೆ. ವಿಜಯ್-ರಶ್ಮಿಕಾ ಗುಟ್ಟಾಗಿ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹೊಸತೇನೂ ಅಲ್ಲ. ಕೇವಲ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ರಶ್ಮಿಕಾ-ವಿಜಯ್ ನಿಶ್ಚಿತಾರ್ಥ ನೆರವೇರಿದೆ ಎಂಬ ಮಾಹಿತಿ ಹೊರಬಿದ್ದಿದೆ. ಎಂಗೇಜ್ಮೆಂಟ್ ಬಗ್ಗೆ ವಿಜಯ್ ದೇವರಕೊಂಡ ಆಗಲಿ, ರಶ್ಮಿಕಾಮಂದಣ್ಣ ಆಗಲಿ ಇನ್ನೂ ಕೂಡ ಅಧಿಕೃತವಾಗಿ ಘೋಷಿಸಿಲ್ಲ. ಒಂದೇ ಒಂದು ಫೋಟೋ ಕೂಡ ಲೀಕ್ ಆಗಿಲ್ಲ.

ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಹಸೆಮಣೆ ಏರಲಿದ್ದಾರಂತೆ. ಇಬ್ಬರೂ ಸಾಲುಸಾಲು ಚಿತ್ರಗಳಲ್ಲಿ ಪುರುಸೊತ್ತಿಲ್ಲದಂತೆ ಬ್ಯುಸಿಯಾಗಿದ್ದಾರೆ. ಹೈದ್ರಾಬಾದ್ ನಲ್ಲೇ ವಾಲಗ ಊದಿಸೋ ಪ್ಲ್ಯಾನ್ ಇದೆಯಂತೆ. ಬಹಿರಂಗವಾಗಿ ವಿಜಯ್-ರಶ್ಮಿಕಾ ಎಲ್ಲವನ್ನೂ ಹೇಳಿಕೊಳ್ಳೋವರೆಗೂ ಇದು ಗಾಸಿಪ್ ಸ್ವರೂಪವಷ್ಟೇ..!



















