ಬೀದರ್: ಸಮೀಕ್ಷೆ ಹೆಸರಿನಲ್ಲಿ ನೈಜ ಸಮಸ್ಯೆಗಳನ್ನು ಮರೆ ಮಾಚುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜಾತಿ ಸಮೀಕ್ಷೆ ವಿಚಾರವಾಗಿ ಬೀದರ್‌ನಲ್ಲಿ ಮಾತನಾಡಿದ ಪ್ರಹ್ಕಾದ್ ಜೋಶಿ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ, ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೂ ಹಣ ಇರಲ್ಲದ ಪರಿಸ್ಥಿತಿಗೆ ರಾಜ್ಯ ಸರ್ಕಾರ ತಲುಪಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್‌ನಿಂದ ಕೇಂದ್ರ ಸರ್ಕಾರ 2021ರಲ್ಲಿ ಜಾತಿ ಗಣತಿ ಮುಂದೂಡಿತು. ಮೊದ್ಲು 175 ಕೋಟಿ ರೂ. ಖರ್ಚು ಮಾಡಿದರು, ಅದು ಹತ್ತಾರು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಈಗ ಪುನಃ ಮಾಡಲು ಹೊರಟಿದ್ದಾರೆ, ಆದರೆ ಯಾವುದೇ ತಯಾರಿ ನಡೆಸಿಲ್ಲ, ಸಮೀಕ್ಷೆ ಮಾಡುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿಲ್ಲ ಹಾಗೂ ಜನರು ಕೂಡ ಈ ಜಾತಿ ಸಮೀಕ್ಷೆ ಬಗ್ಗೆ ಉತ್ಸುಕರಾಗಿಲ್ಲಎಂದು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಹಿಂದೂ ಧರ್ಮದವರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿಗೆ ಬಂದರು ಸರ್ಕಾರ ಕ್ರಮಕೈಗೊಳ್ಳುವುದಿಲ್ಲ. ಇದನ್ನೆಲ್ಲಾ ನೋಡಿದರೆ ಸರ್ಕಾರ ವಿಫಲವಾಗಿದೆ, ಇದನ್ನು ಮರೆಮಾಚುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಆಗುತ್ತೀನಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆ.ಎನ್.ರಾಜಣ್ಣ ಸೆಪ್ಟೆಂಬರ್ ಕ್ರಾಂತಿ ಆಗುತ್ತದೆ ಎಂದು ಹೇಳಿದ್ದರು. ಸಪ್ಟೆಂಬರ್ ಕ್ರಾಂತಿಯನ್ನು ಹೇಗಾದರು ಮುಂದೂಡಲು ಜಾತಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನೆಹರೂ ಅವರಿಂದ ರಾಜೀವ್ ಗಾಂಧಿವರೆಗೆ ಎಸ್ ಸಿ, ಎಸ್ ಟಿ, ಒಬಿಸಿ ಅವರ ಮೀಸಲಾತಿಯನ್ನು ವಿರೋಧಿಸಿದರು ಈಗ ಸಿದ್ರಾಮಯ್ಯನವರು ಅದನ್ನೆ ನಡೆಸಿದ್ದಾರೆ. ಮುಸಲ್ಮಾನ, ಕ್ರಿಶ್ಚಿಯನ್‌ರಲ್ಲೂ ಜಾತಿ ಅಸ್ಪೃಶ್ಯತೆ ಇದೆ ಎಂದು ಒಪ್ಪಿಕೊಳ್ಳುತ್ತೀರಾ? ಧರ್ಮಾದಾರಿತ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಹೊಡೆದು ಹಾಕಿದೆ ರಾಹುಲ್ – ಸೋನಿಯಾ ಮೆಚ್ಚಿಸಲು ಜಾತಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ಉನ್ನತ ಮಟ್ಟದ ಕಾಂಗ್ರೆಸ್ ನಾಯಕರು, ಹೊರ ರಾಜ್ಯದ ಸಂಸದರು ಸೇರಿ ಹಲವರಿದ್ದಾರೆ. ಮಹೇಶ್ ತಿಮರೋಡಿ ಸೇರಿ ಹಲವರನ್ನು ತನಿಖೆ ಮಾಡಿದರೆ ಷಡ್ಯಂತ್ರ ಮಾಡಿರುವವರ ಹೆಸರು ಹೇಳುತ್ತಾರೆ ಎಂದು ಹೇಳಿದ್ದಾರೆ.



















