ಬೆಂಗಳೂರು : ದಶಕಕ್ಕೂ ಹೆಚ್ಚು ಕಾಲದ ಕಾಯುವಿಕೆಯ ಬಳಿಕ, ಮಲ್ಲೇಶ್ವರಂ ವ್ಯಾಪಾರಿಗಳಿಗೆ ಸಿಹಿ ಸುದ್ದಿಯೊಂದು ದೊರಕಿದೆ. ಶೀಘ್ರದಲ್ಲೇ ಸಂಪಿಗೆ ರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಪೂರ್ಣವಾಗಲಿದ್ದು, ರಸ್ತೆ ಅತಿಕ್ರಮಣ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮಲ್ಲೇಶ್ವರಂ ಹಾಗೂ ಸಂಪಿಗೆ ರಸ್ತೆಯ ಉದ್ದಕ್ಕೂ ಇರುವ ಪುಟ್ಪಾತ್ ಅಂಗಡಿ – ಮುಂಗಟ್ಟುಗಳಿಂದ ಟ್ರಾಫಿಕ್ ಜಾಮ್ ಆಗುತಿತ್ತು, ಕೊನೆಗೂ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
11 ಮತ್ತು 13ನೇ ಕ್ರಾಸ್ ನಡುವಿನ ಸಂಪಿಗೆ ರಸ್ತೆಯಲ್ಲಿ ನಿರ್ಮಿಸಲಾದ ಬಿಡಿಎ ಸಂಕೀರ್ಣ ಆರಂಭಕ್ಕೆ ಸಜಗಜಾಗಿದ್ದು, ಬಾಕಿ ಇರುವ ಕೆಲಸವನ್ನು ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೊಸ ಸಂಕೀರ್ಣದಲ್ಲಿ, 183 ಮಾರಾಟಗಾರರನ್ನು ನೆಲ ಮಹಡಿಗೆ ಸ್ಥಳಾಂತರಿಸಲು ಬಿಡಿಎ ನಿರ್ಧಾರ ಮಾಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.



















